.ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಯತ್ತಡ್ಕ ಐಎಡಿ ಜಂಕ್ಷನ್ ಬಳಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ತಡೆದು ನಗದು ದಾಖಲೆ ಒಳಗೊಂಡ ಪರ್ಸ್, ಮೊಬೈಲ್ ಎಗರಿಸಿರುವುದಲ್ಲದೆ ೫೦ ಸಾವಿರ ರೂ. ಮೊತ್ತಕ್ಕೆ ಬೇಡಿಕೆಯಿರಿಸಿದ ಘಟನೆ ನಡೆದಿದೆ. ಕುಂಜತ್ತೂರುಪಡ್ಪು ನಿವಾಸಿ ಅಮಿತ್ ಕುಮಾರ್ ಎಂಬವರನ್ನು ದರೋಡೆಗೈಯ್ಯಲಾಗಿದೆ.
ಜೂನ್ ೨೮ರಂದು ರಾತ್ರಿ ಅಮಿತ್ ಕುಮಾರ್ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ತಂಡವೊಂದು ಬೈಕ್ ತಡೆದು ಹಲ್ಲೆ ನಡೆಸಿರುವುದಲ್ಲದೆ ಕೈಯಲ್ಲಿದ್ದ ೮,೫೦೦ ರೂ. ನಗದು, ದಾಖಲೆ ಹೊಂದಿದ ಪರ್ಸ್, ಮೊಬೈಲ್ ಕಸಿದು ತೆಗೆದಿತ್ತು. ನಂತರ ಇವರನ್ನು ಸನಿಹದ ಕಟ್ಟಡ ವೊಂದಕ್ಕೆ ಕರೆದೊಯ್ದು ಬೆದರಿಕೆಯೊಡ್ಡಿ ೫೦ ಸಾವಿರ ರೂ. ತಂದುಕೊಡುವಂತೆ ಬೇಡಿಕೆಯಿರಿಸಿ ಬಿಟ್ಟುಕೊಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನಿವಾಸಿ ಅಮೀರ್ ಸಹಿತ ಇಬ್ಬರ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.