ಯಕ್ಷಗಾನ ಪ್ರಸಾದನ ಕಲಾವಿದ ನಿಧನ

0
14

ಉಪ್ಪಳ: ಜೋಡುಕಲ್ಲು ನಿವಾಸಿ ಯಕ್ಷಗಾನ ಪ್ರಸಾದನ ಕಲಾವಿದ ವಿಷ್ಣುಪುರುಷ (೬೫) ನಿನ್ನೆ ಬೆಳಿಗ್ಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಾಲ್ಯದಿಂದಲೇ ಯಕ್ಷಗಾನ ಆಸಕ್ತರಾಗಿ ವಿವಿಧ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪೈವಳಿಕೆಯ ದಿ| ದೇವಕಾನ ಕೃಷ್ಣ ಭಟ್ ಅವರ ಸಾರಥ್ಯದ ಶ್ರೀ ಗಣೇಶ್ ಕಲಾವೃಂದದಲ್ಲಿ ಸೇರ್ಪಡೆಗೊಂಡು ಸುಮಾರು ೨೫ ವರ್ಷಗಳಿಗಿಂತಲೂ ಹೆಚ್ಚು ಕಾಲ ಪ್ರಸಾದನ ಕಲಾವಿದರಾಗಿ ದುಡಿಯುತ್ತಿದ್ದರು. ಕಿರೀಟ, ಮಣಿ ಸಾಮಗ್ರಿಗಳ ತಯಾರಿಯಲ್ಲಿ ನೇಪಥ್ಯ ಕಲಾವಿದರಾಗಿ ತಮ್ಮದೇ ಕೊಡುಗೆಗಳ ಮೂಲಕ ಗುರುತಿಸಿಕೊಂಡಿದ್ದರು. ಇವರ ಸೇವಾ ಕಾರ್ಯವನ್ನು ಅರಿತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿತ್ತು. ಮೃತರು ಪತ್ನಿ ಭವಾನಿ, ಮಕ್ಕಳಾದ ಮೋಹನ, ರವಿ, ಗಣೇಶ, ಸೊಸೆಯಂದಿರಾದ ಲಕ್ಷ್ಮಿ, ಪುಷ್ಪ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ಗಣೇಶ ಕಲಾವೃಂದ ಪೈವಳಿಕೆ, ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ, ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ  ಹಾಗೂ ಎಂ.ನಾ. ಚಂಬಲ್ತಿಮಾರ್ ಸಹಿತ ಹಲವರು  ಸಂತಾಪ ಸೂಚಿಸಿದ್ದಾರೆ.

NO COMMENTS

LEAVE A REPLY