ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಟ್ರಸ್ಟಿ ರವೀಂದ್ರನಾಥ ಶೆಟ್ಟಿ ನಿಧನ

0
88

ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಟ್ರಸ್ಟ್ ಎಂಬಿವುಗಳ ಗೌರವಾಧ್ಯಕ್ಷರಾಗಿದ್ದ ಪಿ.ಕೆ. ರವೀಂದ್ರನಾಥ ಶೆಟ್ಟಿ (೭೧) ನಿಧನ ಹೊಂದಿದರು. ಅವಿವಾಹಿತರಾದ ಇವರು ಒಬ್ಬಂಟಿಯಾಗಿದ್ದರು. ನಿನ್ನೆ ಮನೆಯಿಂದ ಹೊರಗೆ ಕಾಣದ ಕಾರಣ ಇವರನ್ನು ಹುಡುಕಿ ನೆರೆ ಮನೆಯವರು ಮನೆಗೆ ತಲುಪಿದಾಗ ಒಳಗಿನಿಂದ ಲಾಕ್ ಮಾಡಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ಪೊಲೀಸರು ತಲುಪಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನಿಧನರಾಗಿರುವುದು ತಿಳಿದು ಬಂದಿದೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿಯ ಶವಾಗಾರಕ್ಕೆ ತಲುಪಿಸಲಾಗಿದೆ. ಉದ್ಯಾವರ ಮಾಡ ಕ್ಷೇತ್ರ ಪದಾಧಿಕಾರಿಯಾಗಿಯೂ ಇವರು ದುಡಿದಿದ್ದಾರೆ.

NO COMMENTS

LEAVE A REPLY