ಚಂದ್ರಗಿರಿ ರಸ್ತೆಯಲ್ಲಿ ಮತ್ತೆ ಮಣ್ಣು ಕುಸಿತ ಭೀತಿ: ಕಸ್ಟಮ್ಸ್ ಕಚೇರಿ ಬಳಿ ಬಿರುಕು

0
134

ಕಾಸರಗೋಡು: ಚಂದ್ರಗಿರಿ ರಸ್ತೆಯಲ್ಲಿ ಕಸ್ಟಮ್ಸ್ ಕಚೇರಿ ಪ್ರದೇಶದಲ್ಲಿ ಗುಡ್ಡೆಯಲ್ಲಿ ಬಿರುಕು ಕಂಡುಬಂದಿದೆ.

ಮಳೆ ಬರುವಾಗ  ಹಿಂದೆಯೂ ಮಣ್ಣು ಕುಸಿತ ಉಂಟಾಗಿದ್ದ ಭಾಗದಲ್ಲಿಯೇ ಈಗಲೂ ಬಿರುಕು ಕಂಡು ಬಂದಿರುವುದು. ಮಳೆ ಮುಂದುವರಿದಾಗ ಮಣ್ಣು ಕುಸಿತ ಉಂಟಾಗಬಹುದಾಗಿದ್ದು ಅದು ಚಂದ್ರಗಿರಿ ರಸ್ತೆಯಲ್ಲಿ ಸಾರಿಗೆ ಸಂಚಾರಕ್ಕೆ ತಡೆ ಸೃಷ್ಟಿಸಲು ಕಾರಣವಾ ದೀತೆಂಬ ಆತಂಕ ನೆಲೆಗೊಂಡಿದೆ.

ವರ್ಷಗಳ ಹಿಂದೆ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ರಸ್ತೆಯ ಬದಿಗಳಲ್ಲಿ ಕಾಂಕ್ರಿಟೀಕರಣ, ಕಗ್ಗಲ್ಲಿನಿಂದ ಭಿತ್ತಿ ನಿರ್ಮಿಸಲಾಗಿತ್ತು. ಇದರ ಬಳಿಯಲ್ಲೇ ಈಗ ಬಿರುಕು ಮೂಡಿರುವುದು ನಿರ್ಮಾಣ ಕಾರ್ಯಗಳನ್ನು ನಡೆಸುವವರು,  ಅದಕ್ಕೆ ನೇತೃತ್ವ ನೀಡುವವರ, ತೋರುವ ಅವಗಣನೆ ಮಣ್ಣು ಕುಸಿತ ಭೀತಿ ಉಂಟಾಗಲು ಕಾರಣವಾಗಿರುವುದೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY