ಕೋವಿಡ್‌ಗೆ ರಾಜ್ಯದಲ್ಲಿ ಇನ್ನೋರ್ವ ಮೃತ್ಯು

0
133

ತಿರುವನಂತಪುರ: ಕೋವಿಡ್ ಬಾಧಿಸಿ ರಾಜ್ಯದಲ್ಲಿ ಇನ್ನೋರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

ತಿರುವನಂತಪುರ ನೆಟ್ಟಯಂ ನಿವಾಸಿ ತಂಗಪ್ಪನ್ (೭೬) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮುಂಬೈಯಿಂದ ಜೂನ್ ೨೪ರಂದು ಕೇರಳಕ್ಕೆ ಬಂದಿದ್ದರು.  ಬರುವಾ ಗಲೇ ಶಾರೀರಿಕ ಅಸೌಖ್ಯ ಇದ್ದುದರಿಂದ ತಿರುವನಂತಪುರದ ಜನರಲ್ ಆಸ್ಪತ್ರೆಯಲ್ಲಿ ದಾಖಲಿ ಲಾಗಿತ್ತು. ಅನಂತರ ಅಸೌಖ್ಯ ಉಲ್ಭಣಿಸಿದ ಹಿನ್ನೆಲೆಯಲ್ಲಿ ಜೂನ್ ೨೭ರಂದು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ದಾಖಲಿಸಿದ ಗಂಟೆಗಳೊಳಗೆ ಮರಣ ಸಂಭವಿಸಿತ್ತು.  ಸಾವಿನ ಬಳಿಕ ಅವರ ಗಂಟಲ ದ್ರವ ತೆಗೆದು ತಪಾಸಣೆಗೆ ಕಳುಹಿಸಲಾಗಿತ್ತು. ಫಲಿತಾಂಶ ಲಭಿಸಿದಾಗ ಅವರಿಗೆ ಕೋವಿಡ್ ಬಾಧಿಸಿರುವುದು ತಿಳಿದುಬಂದಿದೆ. ಇವರ ಸಾವಿನೊಂ ದಿಗೆ ಕೋವಿಡ್ ಬಾಧಿಸಿ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ ೨೪ಕ್ಕೇರಿದೆ.

ಇದೇ ವೇಳೆ ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಐದೂವರೆ ಲಕ್ಷ ದಾಟಿದೆ. ಆರೋಗ್ಯ ಸಚಿವಾಲಯದ ಲೆಕ್ಕಾಚಾರದಂತೆ ೫,೬೬,೮೪೦ ಮಂದಿಗೆ ಇದುವರೆಗೆ ರೋಗ ಬಾಧಿಸಿದೆ. ಕಳೆದ ೨೪ ಗಂಟೆಗಳೊಳಗೆ ೧೮,೫೨೨ ಮಂದಿಗೆ ರೋಗ ಬಾಧೆಯುಂಟಾಗಿದೆ.

೪೧೮ ಮಂದಿ ಮೃತಪಟ್ಟಿದ್ದು,  ಇದರೊಂದಿಗೆ ಮೃತಪಟ್ಟವರ ಸಂಖ್ಯೆ ೧೬,೮೯೩ ಕ್ಕೇರಿದೆ. ಇದೇ ವೇಳೆ ರೋಗ ಬಾಧಿತರ ಪೈಕಿ ೩,೩೪,೮೨೧ ಮಂದಿ ರೋಗ ಮುಕ್ತರಾಗಿದ್ದಾರೆ. ಪ್ರಸ್ತುತ ೨,೧೫,೧೨೫ ಮಂದಿ ಚಿಕಿತ್ಸೆಯಲ್ಲಿದ್ದಾರೆ.

NO COMMENTS

LEAVE A REPLY