ಲಾಕ್‌ಡೌನ್ ಉಲ್ಲಂಘನೆ: ಇಬ್ಬರು ಕಾರು ಚಾಲಕರ ವಿರುದ್ಧ ಕೇಸು

0
14

 ಕುಂಬಳೆ: ಕಾರಿನಲ್ಲಿ ಹಲವು ಮಂದಿಯನ್ನು ಕುಳ್ಳಿರಿಸಿ ಸಂಚರಿಸಿದ ಎರಡು ಕಾರು ಚಾಲಕರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು ೭ ಗಂಟೆಗೆ ಕುಂಬಳೆ ಬಳಿಯ ಕಟ್ಟತ್ತಡ್ಕದಲ್ಲಿ ಎಸ್‌ಐ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಎರಡು ಕಾರಿನಲ್ಲಿ ಅತ್ಯಧಿಕ ಮಂದಿ ಪ್ರಯಾಣಿಸುತ್ತಿದ್ದರು. ಈ ಸಂಬಂಧ ಕಾರು ಚಾಲಕರಾದ ತಳಂಗರೆ  ತಾಯಲಂಗಾಡಿ ನಿವಾಸಿ ಅಹಮ್ಮದ್ (೩೧) ಹಾಗೂ ಮೊಗ್ರಾಲ್ ನಿವಾಸಿ ಸುಮೈಸ್ (೨೮) ವಿರುದ್ಧ ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY