ರೈಲು ನಿಲ್ದಾಣದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ದೆಹಲಿ ನಿವಾಸಿಗಳು ಸೆರೆ: ಕ್ವಾರಂಟೈನ್‌ಗೆ

0
16

ಕಾಸರಗೋಡು: ರೈಲುಗಾಡಿ ಯಲ್ಲಿ ಕಾಸರಗೋಡಿಗೆ ತಲುಪಿದ ಮೂವರು ದೆಹಲಿ ನಿವಾಸಿಗಳು ರೈಲು ನಿಲ್ದಾಣದಲ್ಲಿ ತಪಾಸಣೆ ಗೊಳಪಡದೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಬಳಿಕ ಪೊಲೀಸರು ಅವರನ್ನು ಪತ್ತೆಹಚ್ಚಿ ಕ್ವಾರಂಟೈನ್ ನಲ್ಲಿರಿಸಿದ್ದಾರೆ.  ನಿನ್ನೆ ಮುಂಜಾನೆ ಕಾಸರಗೋಡಿಗೆ ತಲುಪಿದ ರೈಲಿನಲ್ಲಿ ದೆಹಲಿ ನಿವಾಸಿಗಳಾದ ಮೂರು ಮಂದಿ ಬಂದಿದ್ದರು. ರೈಲು ನಿಲ್ದಾಣದಲ್ಲಿ ಪೊಲೀಸರನ್ನು ಕಂಡೊಡನೆ ಅಲ್ಲಿಂದ ಕಣ್ತಪ್ಪಿಸಿ ಪರಾರಿ ಯಾಗಿದ್ದರೂ ಈ ವಿಷಯ ತಿಳಿದ ಪೊಲೀಸರು ಶೋಧ ನಡೆಸಿದಾಗ ಅವರು ತೆರುವತ್ತ್‌ನಲ್ಲಿ ಅನ್ಯ ರಾಜ್ಯ ಕಾರ್ಮಿಕರ ವಾಸಸ್ಥಳದಲ್ಲಿ ರುವುದಾಗಿ ತಿಳಿದುಬಂದಿದೆ. ಕೂಡಲೇ ಅಲ್ಲಿಂದ ಅವರನ್ನು ವಶಕ್ಕೆ ತೆಗೆದು ಪೊಲೀಸರು ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ತಲುಪಿಸಿದರು.

NO COMMENTS

LEAVE A REPLY