ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಗುತ್ತಿಗೆದಾರ ಮೃತ್ಯು

0
20

ಕಾಸರಗೋಡು: ಚೆರ್ಕಳ ಮಾರ್ತೋಮಾ ಶಾಲೆ ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಚೆರ್ಕಳ ನಿವಾಸಿ, ಗುತ್ತಿಗೆದಾರ ಅಬ್ದುಲ್ ಖಾದರ್ (೬೮) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜೂನ್ ೨೯ರಂದು ಅಬ್ದುಲ್ ಖಾದರ್ ಸಂಚರಿಸುತ್ತಿದ್ದ ಸ್ಕೂಟರ್ ಅಪಘಾತಕ್ಕೀಡಾಗಿತ್ತು. ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಂದೇ ಮೃತಪಟ್ಟಿದ್ದರು

ಇವರು ಪತ್ನಿ ದೈನಾಬಿ, ಮಕ್ಕಳಾದ ಹನೀಫ, ಅಬ್ದುಲ್ಲ, ಮುಸ್ತಫ, ಖಮರುನ್ನೀಸ, ಶಬಾನಾ, ಸೊಸೆ ಮುಮ್ತಾಸ್ ಚಾಲ, ಸಹೋದರರಾದ ಸೈದಲಿ ಹಾಜಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇಬ್ಬರು ಸಹೋದರರಾದ ಅಬ್ದುಲ್ಲ ಹಾಗೂ ಕುಂಞಾಮು ಈ ಹಿಂದೆ ನಿಧನರಾಗಿ ದ್ದಾರೆ.  ಅಪಘಾತಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY