ತಲೆನೋವಿಗೆಂದು ಮಾತ್ರೆ ಸೇವಿಸಿ ಮಲಗಿದ ಯುವಕ ತೀವ್ರ ಅಸ್ವಸ್ಥಗೊಂಡು ಮೃತ್ಯು

0
150

ಮಂಜೇಶ್ವರ: ತಲೆನೋವಿಗೆಂದು ಮಾತ್ರೆ ಸೇವಿಸಿ ಮಲಗಿದ ಯುವಕ ಗಂಭೀರ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಮೃತಪಟ್ಟ ಘಟನೆ ನಡೆದಿದೆ.

ಬಾಕ್ರಬೈಲು ಬಳಿಯ ಪಾತೂರು ತಲೆಕ್ಕಿ ನಿವಾಸಿ ದಿ| ಕೊರಗಪ್ಪ ಶೆಟ್ಟಿಗಾರ್‌ರ ಪುತ್ರ ಜಗದೀಶ್ (೩೧) ಮೃತಪಟ್ಟ ಯುವಕ. ಮುಡಿಪು  ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿರುವ ಜಗದೀಶ್‌ಗೆ ನಿನ್ನೆ ಮುಂಜಾನೆ ವೇಳೆ ತಲೆನೋವುಂಟಾಗಿತ್ತೆನ್ನ ಲಾಗಿದೆ.  ಇದರಿಂದ   ಮಾತ್ರೆ ಸೇವಿಸಿ ಮಲಗಿದ್ದರು. ಆದರೆ ಬೆಳಿಗ್ಗೆ  ಗಂಟೆ ೧೦.೩೦ ಆದರೂ ಏಳದ ಹಿನ್ನೆಲೆಯಲ್ಲಿ ತಾಯಿ ನೋಡಿದಾಗ ಜಗದೀಶ್ ಗಂಭೀರ ಸ್ಥಿತಿಯಲ್ಲಿದ್ದರೆನ್ನಲಾಗಿದೆ. ವಿಷಯ ತಿಳಿದು ಬೇಕರಿ ಜಂಕ್ಷನ್‌ನಲ್ಲಿ ವಾಸಿಸುವ ಸಹೋದರ ಬಾಲಕೃಷ್ಣ ಕೂಡಲೇ ಮನೆಗೆ ತಲುಪಿ ಜಗದೀಶ್‌ರನ್ನು ಆಂಬುಲೆನ್ಸ್‌ನಲ್ಲಿ ಮಂಗಲ್ಪಾಡಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ಜಗದೀಶ ಮೃತಪಟ್ಟರೆನ್ನಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದು ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರು  ತಾಯಿ ದೇವಕಿ, ಸಹೋದರ ಬಾಲಕೃಷ್ಣ, ಸಹೋದರಿ ಭಾರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವರ್ಕಾಡಿ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್  ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದರು.

NO COMMENTS

LEAVE A REPLY