ಕೋವಿಡ್-೧೯: ಒಂದೇ ದಿನ ೧೮,೬೫೩ ಮಂದಿಯಲ್ಲಿ ವೈರಸ್ ಪತ್ತೆ

0
16

ನವದೆಹಲಿ: ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೮,೬೫೩ ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ೫,೮೫,೪೯೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.  ಇನ್ನು ನಿನ್ನೆ ಒಂದೇ ದಿನ ಮಹಾಮಾರಿ ವೈರಸ್ ಬರೋಬ್ಬರಿ ೫೦೭ ಮಂದಿಯನ್ನು ಬಲಿಪಡೆದುಕೊಂಡಿದ್ದು, ಈ ವರೆಗೂ ವೈರಸ್’ನಿಂದ ಸಾವನ್ನಪ್ಪಿದವರ ಸಂಖ್ಯೆ ೧೭,೪೦೦ಕ್ಕೆ ತಲುಪಿದೆ.

ಇನ್ನು ೫,೮೫,೪೯೩ ಮಂದಿ ಸೋಂಕಿತರ ಪೈಕಿ ೩,೪೭,೯೭೯ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿನ್ನೂ ೨,೨೦,೧೧೪ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಸಚಿವಾಲಯ ತಿಳಿಸಿದೆ. ಈ ನಡುವೆ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೯೦,೧೬೭ಕ್ಕೆ ಏರಿಕೆಯಾಗಿದ್ದು, ೧,೨೦೧ ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

NO COMMENTS

LEAVE A REPLY