ಬಸ್‌ದರ ಹೆಚ್ಚಳಕ್ಕೆ ಸಚಿವ ಸಂಪುಟ ಅಂಗೀಕಾರ

0
153

ತಿರುವನಂತಪುರ: ರಾಜ್ಯದಲ್ಲಿ ಬಸ್ ದರ ಹೆಚ್ಚಳಕ್ಕೆ ಇಂದುರಾಜ್ಯ ಸಚಿವ ಸಂಪುಟ ಅಂಗೀಕಾರ ನೀಡಿದೆ. ಕನಿಷ್ಠ ದರ  ೮ ರೂ. ವನ್ನಾಗಿ ಉಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ದರ ಹೆಚ್ಚಿಸಿದ್ದರೂ, ಆ ಬಳಿಕ ಹಿಂದಿನ ದರವನ್ನು ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ ಮಾಲಕರ ಬೇಡಿಕೆಯಂತೆ ಜಸ್ಟೀಸ್  ರಾಮ ಚಂದ್ರನ್ ಕಮಿಶನ್ ವರದಿ  ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದೆ.

ದೂರ ಮಿತಿಯನ್ನು ಕಡಿಮೆ ಮಾಡಿ ಎರಡೂವರೆ ಕಿಲೋ ಮೀಟರ್‌ಗೆ ೮ ರೂ. ನಿಗದಿಪಡಿಸ ಲಾಗಿದೆ.  ಇದುವರೆಗೆ ೫ ಕಿಲೋ ಮೀಟರ್ ಕನಿಷ್ಠ ದೂರವಾಗಿ ನಿಗದಿಯಾಗಿತ್ತು. ಈಗಿನ ದರದಂತೆ ೫ ಕಿಲೋ ಮೀಟರ್ ದೂರ ಸಂಚರಿಸಲು ೧೧ ರೂ. ವರೆಗೆ ನೀಡಬೇಕಾಗಿದೆ. ಕನಿಷ್ಠ ದರದಲ್ಲಿ ಎರಡೂವರೆ ಕಿಲೋ ಮೀಟರ್‌ವರೆಗೆ ಸಂಚರಿಸಬಹುದಾಗಿದೆ. ಕಿಲೋ ಮೀಟರ್‌ಗೆ ೯೦ ಪೈಸೆಯಂತೆಯೂ ಹೆಚ್ಚಿಸಲಾಗಿದೆ.

NO COMMENTS

LEAVE A REPLY