ಪ್ರಧಾನಿ ಫ್ಲೆಕ್ಸ್‌ಗೆ ಕರಿ ಆಯಿಲ್- ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕೇಸು

0
121

ಕಾಸರಗೋಡು: ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೆಕ್ಸ್‌ಗೆ ಕರಿ ಆಯಿಲ್ ಸುರಿದ ಹಾಗೂ ಇದನ್ನು ತಡೆಯಲು ಮುಂದಾದ ಪೊಲೀಸರ ಕರ್ತವ್ಯಕ್ಕೆ ತಡೆಯೊಡ್ಡಿದ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ಸಂಜೆ ಅಣಂಗೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಆಬಿದ್, ಸಾಜಿದ್, ಸಫ್ವಾನ್, ಸುಧೀಶ್ ನಂಬ್ಯಾರ್ ಸಹಿತ ಐದು ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಒಳಗೊಂಡ ಫ್ಲೆಕ್ಸ್‌ಗೆ ಕರಿ ಆಯಿಲ್ ಸುರಿಯಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆಯಲೆತ್ನಿಸಿದ್ದರು. ಈ ಸಂದರ್ಭ ಪೊಲೀಸರ ತಡೆ ಬೇದಿಸಿ ಕೃತ್ಯವೆಸಗಿದ್ದರು.

NO COMMENTS

LEAVE A REPLY