ಕೋವಿಡ್ ಮಾನದಂಡ ಉಲ್ಲಂಘಿಸಿದ ಬಸ್ ವಶ

0
22

ಕಾಸರಗೋಡು: ಕೋವಿಡ್-೧೯ ರೋಗ ನಿಯಂತ್ರಣ ಹಿನ್ನೆಲೆ ಯಲ್ಲಿ ಸರಕಾರದ ಮಾನದಂಡವನ್ನು ಉಲ್ಲಂಘಿಸಿ ಸಂಚಾರ ನಡೆಸಿದ ಸಹಕಾರಿ ಸಂಸ್ಥೆಯ ಬಸ್ಸೊಂದನ್ನು ಚೆರ್ಕಳದಿಂದ ವಿದ್ಯಾನಗರ ಠಾಣೆ ಪೊಲೀಸರು ವಶಕ್ಕೆ ತೆಗೆದು ಕೇಸು ದಾಖಲಿಸಿಕೊಂಡಿದ್ದಾರೆ.

ಜೂನ್ ೩೦ರಂದು ಕಾಸರಗೋಡಿನಿಂದ ಮುಳ್ಳೇರಿಯಕ್ಕೆ ಸಂಚರಿಸುತ್ತಿದ್ದ ಬಸ್ ಚೆರ್ಕಳದಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೇರಿಕೊಂಡು ಸಂಚಾರ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ನಿಟ್ಟಿನಲ್ಲಿ ಕಾರ್ಯಾಚರಿಸಿದ ಪೊಲೀಸರು ಬಸ್ಸನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

NO COMMENTS

LEAVE A REPLY