ಲಡಾಕ್‌ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ; ಸೈನಿಕರೊಂದಿಗೆ ಮಾತುಕತೆ

0
17

ದೆಹಲಿ: ಲಡಾಕ್‌ನ ಪೂರ್ವ ಭಾಗದಲ್ಲಿ ಭಾರತ ಮತ್ತು ಚೀನಾ ಯೋಧರು ಪರಸ್ಪರ ಕಟ್ಟೆಚ್ಚರದಿಂದ ಕುಳಿತಿರುವ ಮಧ್ಯೆ ಪ್ರಧಾನಿ ನರೇಂದ್ರಮೋದಿ ಇಂದು ಲೇಹ್‌ಗೆ ದಿಢೀರ್ ಭೇಟಿ ನೀಡಿದ್ದಾರೆ.

ಸೇನಾಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಮತ್ತು ಸೇನಾ ಸಿಬ್ಬಂದಿಯ ಮುಖ್ಯ ಜನರಲ್ ಬಿಪಿನ್‌ರಾವತ್ ಪ್ರಧಾನಿ ಜತೆಗಿದ್ದರು. ಹದಿನಾಲ್ಕು ಕೋರ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಅವರು ಸೇನಾ ಸಿಬ್ಬಂದಿ  ಮುಖ್ಯಸ್ಥ ಜನರಲ್  ಅವರಿಗೆ ಸದ್ಯದ ಅವಶ್ಯಕತೆಗಳ ಕುರಿತು ಮಾಹಿತಿ ಒದಗಿಸುತ್ತಿದ್ದಾರೆ. ಲೇಹ್ ಸಂದ ರ್ಶನದ  ನಂತರ ನಿಮುಗೆ ಭೇಟಿ ನೀಡಿದ ಪ್ರಧಾನಿ, ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಸೈನಿಕ ಆಸ್ಪತ್ರೆಗೆ ತೆರಳಿ ೧೮ ದಿವಸಗಳ ಹಿಂದೆ ನಡೆದ ಚಕಮಕಿಯಲ್ಲಿ ಗಾಯ ಗೊಂಡ ಸೈನಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲಿದ್ದಾರೆ. ನೀಮುವಿನಲ್ಲಿ ಹೆಚ್ಚಿನ ಸಮಯವನ್ನು ಸೈನಿಕ ರೊಂದಿಗೆ ಮಾತುಕತೆಗಾಗಿ ಪ್ರಧಾನಿ ಮೀಸಲಿಟ್ಟಿದ್ದರು. ಮಧ್ಯಾಹ್ನ ಭೇಟಿ ಪೂರ್ತಿಗೊಳಿಸಿ ಪ್ರಧಾನಿ ದೆಹಲಿಗೆ ತೆರಳಲಿದ್ದಾರೆ.

ಸಮುದ್ರಮಟ್ಟದಿಂದ ೧೧ ಸಾವಿರ ಅಡಿ ಎತ್ತರದಲ್ಲಿ ನೀಮು ಸೈನಿಕ ಚೆಕ್‌ಪೋಸ್ಟ್ ಇದೆ.

NO COMMENTS

LEAVE A REPLY