ಕ್ವಾರಂಟೈನ್‌ನಲ್ಲಿದ್ದಾಗ ಮೃತಪಟ್ಟ ಯುವಕನಿಗೆ ಕೋವಿಡ್ ಬಾಧಿಸಿಲ್ಲ

0
21

ಕಾಸರಗೋಡು: ಕ್ವಾರಂಟೈನ್ ನಲ್ಲಿದ್ದಾಗ ಕಾಸರಗೋಡಿನ ಎಯರ್‌ಲೈನ್ಸ್ ಲಾಡ್ಜ್‌ನಲ್ಲಿ ಮೊನ್ನೆ ಮೃತಪಟ್ಟ ಉತ್ತರ ಪ್ರದೇಶ ನಿವಾಸಿ ಬಂಟಿ (೨೫)ಗೆ ಕೋವಿಡ್ ರೋಗ ಬಾಧಿಸಿರಲಿಲ್ಲವೆಂದು ಖಚಿತಗೊಂಡಿದೆ. ಮೃತಪಟ್ಟ ಬಂಟಿಯ ಗಂಟಲ ದ್ರವ ತಪಾಸಣೆ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿರುವ ಆತನ ಸಂಬಂಧಿಕರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಕಾಸರಗೋಡಿಗೆ ಬರುವುದಾಗಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣ ಕಠಿಣಗೊಳಿಸಿರುವುದರಿಂದ ಸಂಬಂಧಿಕರಿಗೆ ಇಲ್ಲಿಗೆ ತಲುಪಲು ಸಾಧ್ಯವಿದೆಯೇ ಎಂಬ ಆತಂಕ ಹುಟ್ಟಿದೆ.

ಮೃತಪಟ್ಟ ಬಂಟಿಯೊಂದಿಗೆ ಇದ್ದ ಇಬ್ಬರು ಕ್ವಾರಂಟೈನ್‌ನಲ್ಲಿದ್ದಾರೆ.

NO COMMENTS

LEAVE A REPLY