ಬಾಲಕನನ್ನು ಕರೆದುಕೊಂಡು ಹೋಗಿ ಆಕ್ರಮಣ: ತಪ್ಪಿಸಿ ಓಡಿದ ಬಾಲಕನಿಂದ ದೂರು

0
18

ವರ್ಕಾಡಿ: ಬಾಲಕನನ್ನು ಪುಸಲಾಯಿಸಿ ನಿರ್ಜನ ಪರಿಸರಕ್ಕೆ ಕರೆದುಕೊಂಡು ಹೋಗಿ ಆಕ್ರಮಣ ನಡೆಸಲು ಯತ್ನಿಸಿದ ವ್ಯಕ್ತಿ ವಿರುದ್ಧ ಬಾಲಕ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಮಜೀ ರ್ಪಳ್ಳದಲ್ಲಿ ನಿನ್ನೆ  ಅಪರಾಹ್ನ ೨ ಗಂಟೆಗೆ ಘಟನೆ ನಡೆದಿದೆ. ಇಲ್ಲಿನ ಸಿದ್ದಿಕ್ ಎಂಬಾತ ೧೫ರ ಬಾಲಕ ನನ್ನು ಪುಸಲಾಯಿಸಿ ಸಮೀಪದ ನಿರ್ಜನ ಪ್ರದೇಶದ ಕಾಡಿಗೆ ಕರೆದುಕೊಂಡುಹೋಗಿದ್ದಾನೆ. ಬಳಿಕ ಕೈಯನ್ನು ಕಟ್ಟಿಹಾಕಿ ಕುತ್ತಿಗೆ ಹಿಡಿಯಲು ಯತ್ನಿಸುತ್ತಿದ್ದ ಮಧ್ಯೆ ಬಾಲಕ ಅಲ್ಲಿಂದ ತಪ್ಪಿಸಿ ಓಡಿದಾನೆ. ಬಳಿಕ ಮನೆಯವರಿಗೆ ತಿಳಿಸಿ ಮಂಜೇಶ್ವರ  ಠಾಣೆಗೆ ದೂರು  ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY