ಸಂಪರ್ಕ ಮೂಲಕ ರೋಗ ಹರಡುವಿಕೆಯಿಂದ ಹೆಚ್ಚಿದ ಆತಂಕ: ರಾಜ್ಯ ಇನ್ನಷ್ಟು ನಿಯಂತ್ರಣದತ್ತ

0
27

ಕಾಸರಗೋಡು: ಕೋವಿಡ್ ರೋಗದ ಮೂಲ ಪತ್ತೆಹಚ್ಚಲಾಗದ ರೀತಿಯಲ್ಲಿ  ಸಂಪರ್ಕ ಮೂಲಕ ವ್ಯಾಪಕವಾಗಿ ಸೋಂಕು ಹರಡತೊಡಗಿ ರುವುದು ರಾಜ್ಯದಲ್ಲಿ ಆತಂಕಕ್ಕೆ  ಕಾರಣವಾಗಿದೆ. ರೋಗಬಾಧಿತರ ಸಂಖ್ಯೆ ನಿನ್ನೆ ೨೦೦ ದಾಟುವುದರೊಂದಿಗೆ ಸಂಪರ್ಕ ಮೂಲಕ ರೋಗ ಬಾಧಿತರ ಸಂಖ್ಯೆ ಹೆಚ್ಚಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ನಿನ್ನೆ ಮಾತ್ರ ೨೧೧ ಮಂದಿಗೆ ರೋಗ ದೃಢೀಕರಿಸ ಲಾಗಿದೆ. ಇಷ್ಟು ಮಂದಿಗೆ ಒಂದೇ ದಿನ ರೋಗ ಬಾಧಿಸುತ್ತಿರುವುದು ಇದೇ ಮೊದಲಾಗಿದೆ. ಇವರಲ್ಲಿ ೨೭ ಮಂದಿಗೆ ಸಂಪರ್ಕ ಮೂಲಕ ರೋಗ ಬಾಧಿಸಿ ರುವುದು ಅಧಿಕಾರಿಗಳಲ್ಲಿ ಆತಂಕ ಹುಟ್ಟಿಸಿದೆ.

ಈರೀತಿ ಸಂಪರ್ಕ ಮೂಲಕ ರೋಗ ಹರಡಿರುವ ಮೂಲ  ತಿಳಿಯಲಾಗದಿ ರುವುದು ಆತಂಕಕ್ಕೆ ಕಾರಣವಾಗಿದೆ. ಎರಡು ತಿಂಗಳೊಳಗೆ ೪೧೩ ಮಂದಿಗೆ ಸಂಪರ್ಕ ಮೂಲಕ ರೋಗ ಹರಡಿದೆಯೆಂದು ತಿಳಿಸಲಾಗಿದೆ. ಸಾಮೂಹಿಕ  ಹರಡುವಿಕೆ ಉಂಟಾಗ ಲಿಲ್ಲವೆಂದು ಸರಕಾರ ತಿಳಿಸುತ್ತಿದ್ದರೂ ಸಾಮೂಹಿಕ ಹರಡುವಿಕೆ ಆತಂಕಕ್ಕೆ ತಲುಪಿದೆಯೆಂಬುದನ್ನು ಲೆಕ್ಕಾಚಾರಗಳು ಸೂಚಿಸುತ್ತಿವೆ.

ವಿದೇಶದಿಂದ ಹಾಗೂ ಇತರ ರಾಜ್ಯಗಳಿಂದ ಆಗಮಿಸುವವರಿಂದ  ಸೋಂಕು ಹರಡುವುದರ ಹೊರತು ರಾಜ್ಯದೊಳಗೆ ಸಂಚರಿಸುವವರಿಗೂ ರೋಗ ಬಾಧಿಸಿವೆಯೆಂಬುವುದನ್ನು ತಿರುವನಂತರಪುರ, ಎರ್ನಾಕುಳಂ, ಆಲ ಪ್ಪುಳ, ತೃಶೂರು, ಮಲಪ್ಪುರಂ ಜಿಲ್ಲೆಗಳಲ್ಲಿ ಕೆಲವರಿಗೆ ರೋಗ ಹರಡವುದರಿಂದ ಸಾಬೀತುಪಡಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳೊಳಗೆ ಇಬ್ಬರಿಗೆ ಸಂಪರ್ಕ ಮೂಲಕ ರೋಗ ಖಚಿv ಪಡಿಸಲಾಗಿದೆ. ಇದರಲ್ಲಿ ಚಟ್ಟಂಚಾಲ್ ನಲ್ಲಿ ರೋಗ ಖಚಿತಗೊಂಡ ವ್ಯಕ್ತಿಗೆ ಎಲ್ಲಿಂದ ತಗಲಿದೆಯೆಂದು ತಿಳಿದುಬಂದಿಲ್ಲ.

ರಾಜ್ಯದಲ್ಲಿ ಇದುವರೆಗೆ ಒಟ್ಟು ೪೯೬೪ ಮಂದಿಗೆ ಕೋವಿಡ್ ಬಾಧಿಸಿದೆ. ರೋಗ ಹರಡುವಿಕೆ ಹಿನ್ನೆಲೆಯಲ್ಲಿ ತಿರುವನಂತಪುರದಲ್ಲಿ ಅಂಗಡಿ, ಹೋಟೆಲ್‌ಗಳನ್ನು ಏಳು ದಿನಗಳ ಕಾಲಕ್ಕೆ  ಮುಚ್ಚುಗಡೆಗೊಳಿಸಲು ನಿರ್ಧರಿಸಲಾಗಿದೆ.

ಪಾಳಯಂ ಮಾರುಕಟ್ಟೆ ಮುಚ್ಚುಗಡೆಗೊಳಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ ಕಠಿಣ ನಿಯಂತ್ರಣ ಹೇರಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲೂ ನಿಯಂತ್ರಣ ಏರ್ಪಡಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಹೋಟೆಲ್,  ಸಹಿತ ಅಂಗಡಿ ಕಾರ್ಯಚರಣೆ ಸಮಯ ಬೆಳಿಗ್ಗೆ ೫ರಿಂದ ರಾತ್ರಿ ೯ರ ವರೆಗೆ ಮುಂದುವರಿಸಲು ಕಲೆಕ್ಟರೇಟ್‌ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

NO COMMENTS

LEAVE A REPLY