ನೆಲ್ಲಿಕಟ್ಟೆ ನಿವಾಸಿ ಯುವತಿಯ ಕೊಲೆ: ಆರೋಪಿ ಪತಿ ಪೊಲೀಸ್ ಕಸ್ಟಡಿಯಲ್ಲಿ

0
21

ಕಾಸರಗೋಡು: ನೆಲ್ಲಿಕಟ್ಟೆ ಬಳಿಯ ಸಾಲೆತ್ತಡ್ಕ ನಿವಾಸಿಯಾದ ಶಾಂತಾ (೩೦) ಎಂಬಾಕೆಯನ್ನು ಕೊಲೆಗೈದು ಕಲ್ಲಿನ ಕೋರೆಗೆ ಎಸೆದ ಪ್ರಕರಣದಲ್ಲಿ ಆಕೆಯ ಪತಿ ಕರ್ನಾಟಕದ ಹಾಸನ ನಿವಾಸಿ ಗಣೇಶ್ (೪೦) ಎಂಬಾತನನ್ನು ಮಂಗಳೂರು  ಕಾವೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಮಾಹಿತಿಯಿದೆ.    

ಕೊಲೆಗೀಡಾದ ಶಾಂತಾರ ಸಂಬಂಧಿಕರಾದ ಕೆಲವರು ನಿನ್ನೆ ಮಂಗಳೂರಿಗೆ ತಲುಪಿದ್ದು, ಮೃತದೇಹದ ಗುರುತು ಹಚ್ಚಿದ್ದಾರೆ.     ಈ ಹಿಂದೆ ನಾರಂಪಾಡಿಯಲ್ಲಿ ವಾಸಿಸುತ್ತಿದ್ದ ಶಾಂತಾರ ಕುಟುಂಬ ಅನಂತರ ಸಾಲೆತ್ತಡ್ಕಕ್ಕೆ ವಾಸ ಬದಲಿಸಿತ್ತು. ವರ್ಷಗಳ ಹಿಂದೆ ಈ ಕುಟುಂಬ ಬೆಳ್ತಂಗಡಿಗೆ ತೆರಳಿದ್ದಾಗ ಗಣೇಶ್‌ನ ಪರಿಚಯವಾಗಿದ್ದು, ಬಳಿಕ ಆತನಿಗೆ ಶಾಂತಾಳನ್ನು ಮದುವೆಮಾಡಿ ಕೊಡಲಾಗಿತ್ತೆಂದು ಹೇಳಲಾಗುತ್ತಿದೆ. ಅನಂತರ ಮಂಗಳೂರಿನ ಕಾವೂರು ಬಳಿ ಬಾಡಿಗೆ ಮನೆಯಲ್ಲಿ ಗಣೇಶ್ ಹಾಗೂ ಶಾಂತಾ ವಾಸ ಆರಂಭಿಸಿದ್ದರು.  ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗಿನಿಂದ ಇವರ  ಜತೆ ಶಾಂತಾರ ತಾಯಿಯೂ  ಇದ್ದರೆನ್ನಲಾಗುತ್ತಿದೆ. ಜುಲೈ ೧ರಂದು ಸಂಜೆ ಪತ್ನಿ ಶಾಂತಾರನ್ನು ಕರೆದುಕೊಂಡು ಗಣೇಶ್ ಹೊರಗೆ ತೆರಳಿದ್ದನು. ಬಳಿಕ ಅವರ ಮರಳಿ ಬಂದಿರಲಿಲ್ಲ. ಈ ಮಧ್ಯೆ ಮೊನ್ನೆ ಸಂಜೆ ಮನೆಗೆ ಪೋನ್ ಮಾಡಿದ ಗಣೇಶ್ ತಾನು ಶಾಂತಾಳನ್ನು ಕೊಲೆಮಾಡಿ ಕರಂಬಾರು ಅಂತೋಣಿಕಟ್ಟೆ ಎಂಬಲ್ಲಿರುವ ಕಲ್ಲಿನ ಕೋರೆಗೆ ಎಸೆದಿರುವುದಾಗಿ ತಿಳಿಸಿದ್ದನ. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಕಾವೂರು ಪೊಲೀಸರು ಅಂತೋಣಿಕಟ್ಟೆಯ ಕೋರೆಗೆ ತೆರಳಿ ಶೋಧ ನಡೆಸಿದಾಗ  ಶಾಂತಾರ ಮೃತದೇಹ ಪತ್ತೆಯಾಗಿತ್ತು.

NO COMMENTS

LEAVE A REPLY