ಜುಗಾರಿನಿರತ ೩ ಮಂದಿ ಸೆರೆ: ಓರ್ವ ಪರಾರಿ

0
16

ಮಂಜೇಶ್ವರ: ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಮಂಜೇಶ್ವರ ಪೊಲೀಸರು ೩ ಮಂದಿಯನ್ನು ಸೆರೆಹಿಡಿದಿದ್ದಾರೆ. ಓರ್ವ ಪರಾರಿಯಾಗಿದ್ದು, ೫೯೧೦ ರೂ. ವಶಪಡಿಸಿದ್ದಾರೆ. ನಿನ್ನೆ ಸಂಜೆ ೬.೧೦ರ ವೇಳೆ ಕುಂಜತ್ತೂರು ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಜುಗಾರಿ ದಂಧೆ ನಡೆದಿತ್ತು. ಇಲ್ಲಿಂದ ಕುಂಜತ್ತೂರು ಸರಕಾರಿ ಶಾಲಾ ಪರಿಸರ ನಿವಾಸಿ ಮೊಹಮ್ಮದ್ ಅಶ್ರಫ್(೫೧), ತೂಮಿನಾಡು ಹರೀಶ (೩೮), ಉದ್ಯಾವರ ನಿವಾಸಿ ಮೊಹಮ್ಮದ್ ಕುಂಞಿ (೫೬) ಎಂಬವರು ಸೆರೆಗೀಡಾಗಿ ದ್ದಾರೆ. ಇನ್ನೋರ್ವ ಪರಾರಿಯಾಗಿ ದ್ದಾನೆ. ಎಸ್.ಐ. ರಾಘವನ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.

NO COMMENTS

LEAVE A REPLY