ಹೊಗೆಸೊಪ್ಪು ಉತ್ಪನ್ನ ಸಹಿತ ಮೂವರ ಸೆರೆ: ಬೈಕ್, ಮಾಲು ವಶ

0
15
Exif_JPEG_420

ಮಂಜೇಶ್ವರ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಎರಡು ಗೋಣಿಚೀಲ ಹೊಗೆಸೊಪ್ಪು ಉತ್ಪನ್ನ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ ೯.೧೦ರ ವೇಳೆ ಸುಂಕದಕಟ್ಟೆಯಲ್ಲಿ ಎಸ್.ಐ ರಾಜು ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ದಾರಿಯಾಗಿ ಬಂದ ಬೈಕನ್ನು ತಪಾಸಣೆ ನಡೆಸಿದಾಗ ಎರಡು ಪ್ಲಾಸ್ಟಿಕ್ ಗೋಣಿಚೀಲದಲ್ಲಿ ಮಾಲು ಪತ್ತೆಯಾಗಿದೆ. ೬೨ ಸಣ್ಣ ಪ್ಯಾಕೆಟ್‌ಗಳಿರುವ ೧೮೫ ದೊಡ್ಡ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ. ಈ ಸಂಬಂಧ ಬೈಕ್ ಸವಾರರಾದ ಬಿ.ಸಿ. ರೋಡ್ ಹೇರೂರು ನಿವಾಸಿ ಮೊಹಮ್ಮದ್ ಹನೀಫ್ (೩೯), ವರ್ಕಾಡಿ ನಿವಾಸಿ ಅಬೂಬಕರ್ ಎಂಬವರನ್ನು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ೧೨ ಗಂಟೆಗೆ ಎಸ್.ಐ. ರಾಘವನ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ವರ್ಕಾಡಿ ಪಾವಳದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ೩೨ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶಪಡಿಸಿ ದ್ದಾರೆ. ಈ ಸಂಬಂಧ ಗೋಳಿಯಡ್ಕ ನೀರ್ಚಾಲ್ ನಿವಾಸಿ ರಿಯಾಜ್ (೩೪)ನನ್ನು ಸೆರೆಹಿಡಿದಿದ್ದಾರೆ.

NO COMMENTS

LEAVE A REPLY