ಗಾಳ ಹಾಕಲು ಹೋದ ವೃದ್ಧ ಹೊಳೆಗೆ ಬಿದ್ದು ಮೃತ್ಯು

0
207

ಮುಂಡ್ಯತ್ತಡ್ಕ: ಬಾಡೂರು ಹೊಳೆ ಯ ಮಲಂಗರೆ ಎಂಬಲ್ಲಿ ವೃದ್ಧ ನೀರಿನ ಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮಲಂಗರೆ ನಿವಾಸಿ ಅಶೋಕನ್ ಯಾನೆ ಬಾಬು (೬೫) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಊಟ ಮಾಡಿದ ಬಳಿಕ ಇವರು ಸ್ನೇಹಿತನೂ ನೆರೆಮನೆ ನಿವಾಸಿಯೂ ಆದ ಉಮೇಶ ಎಂಬವರೊಂದಿಗೆ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿಯುವ ವೇಳೆ ಕಾಲು ಜಾರಿ ಹೊಳೆಗೆ ಬಿದ್ದ ಇವರನ್ನು ರಕ್ಷಿಸಲು ಉಮೇಶ ಹಾಗೂ ನಾಗರಿಕರು ಪ್ರಯತ್ನಿಸಿದರೂ ಅಶೋಕ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದು ಕಾಸರಗೋಡಿನಿಂದ ತಲುಪಿದ ಅಗ್ನಿ ಶಾಮಕ ದಳ, ಬದಿಯಡ್ಕ ಪೊಲೀಸರು ಹಾಗೂ ನಾಗರಿಕರು ಶೋಧ ನಡೆಸಿದಾಗ ೨೦೦ ಮೀಟರ್ ದೂರದ ಮಕ್ಕಿ ಮೋನಡ್ಕ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

ಕುಂಬಳೆ ನಿವಾಸಿಯಾದ ಅಶೋಕ ವರ್ಷಗಳ ಹಿಂದೆ ಮಲಂಗರೆಯಲ್ಲಿ ವಾಸ ಆರಂಭಿಸಿದ್ದರು. ಮರದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರಶಾಂತ್, ಅರುಣ್ ಕುಮಾರ್, ರಾಜೇಶ್ ಕುಮಾರ್, ಶರತ್‌ರಾಜ್, ದಿವ್ಯಜ್ಯೋತಿ ಹಾಗೂ ಅಪಾರ -ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY