ಆದೂರು ಎಸ್.ಐಗೆ ಬೆದರಿಕೆ: ಕೇಸು

0
15

ಮುಳ್ಳೇರಿಯ: ಆದೂರು ಎಸ್‌ಐ ರತ್ನಾಕರನ್‌ರಿಗೆ ಬೆದರಿಕೆ ಯೊಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಕಾಸರಗೋಡಿನಲ್ಲಿ ಮೀನು ವ್ಯಾಪಾರಿಯಾಗಿರುವ ಪೊವ್ವಲ್ ನಿವಾಸಿಯಾದ ಫೈಸಲ್ (೪೦) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮಾಸ್ತಿಕುಂಡ್‌ನ ಕ್ವಾರ್ಟರ್ಸ್ ನಲ್ಲಿ ವಾಸಿಸುವ ಈತ ೫ ತಿಂಗಳಿಂದ ಬಾಡಿಗೆ ನೀಡುತ್ತಿಲ್ಲವೆಂದು ಕ್ವಾರ್ಟ ರ್ಸ್‌ನ ಮಾಲಕಿ ಸಕೀನರ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಎಸ್‌ಐಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈಬಗ್ಗೆ ಎಸ್‌ಐ.ಯ ದೂರಿನಂತೆ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY