ಬೀಡಿ ಗುತ್ತಿಗೆದಾರನ ಸಾವು ಕೋವಿಡ್‌ನಿಂದ: ೪೦೦ರಷ್ಟು ಕಾರ್ಮಿಕರ ಸಂಪರ್ಕ ಪಟ್ಟಿ ತಯಾರಿ

0
223

ಕಾಸರಗೋಡು:  ತಾಳಿಪಡ್ಪುವಿನ ಬೀಡಿ ಗುತ್ತಿಗೆದಾರ ಶಶಿಧರ ಅವರ ಸಾವು ಕೋವಿಡ್ ಬಾಧಿಸಿ ಸಂಭವಿಸಿದೆ ಯೆಂದು ತಿಳಿದು ಬಂದಿದೆ. ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈರಾಲಜಿ ಲ್ಯಾಬ್‌ನಲ್ಲಿ ಶಶಿಧರರ ಗಂಟಲ ದ್ರವ ತಪಾಸಣೆ ನಡೆಸಿದಾಗ ಇವರಿಗೆ ಕೋವಿಡ್ ಬಾಧಿಸಿತ್ತೆಂದು ಸ್ಪಷ್ಟಗೊಂಡಿದೆ. ಕಾಸರಗೋಡಿನಲ್ಲಿ ನಡೆದ ಆಂಟಿಜನ್ ತಪಾಸಣೆ ಯಲ್ಲೂ ಅವರಿಗೆ ಕೋವಿಡ್ ಲಕ್ಷಣ ಪತ್ತೆಯಾಗಿತ್ತು. ಆದರೆ ರೋಗ ನಿರ್ಧರಿಸುವಲ್ಲಿ ಆ ತಪಾಸಣೆ ಅಂತಿಮವಲ್ಲದುದರಿಂದ ತಜ್ಞ ಪರಿಶೀಲನೆಗಾಗಿ ಗಂಟಲದ್ರವವನ್ನು ಆಲಪ್ಪುಳದ ಲ್ಯಾಬ್‌ಗೆ ಕಳುಹಿಸಿ ರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಶಿಧರ ನಡೆಸುತ್ತಿದ್ದ ಮೂರು ಬೀಡಿ ಸಂಸ್ಥೆಗಳಲ್ಲಾಗಿ ೪೦೦ರಷ್ಟು ಕಾರ್ಮಿಕರು ಇದ್ದಾರೆಂದು ಹೇಳಲಾಗುತ್ತಿದೆ. ಇವರ ಸಂಪರ್ಕ ಪಟ್ಟಿಯನ್ನು ಆರೋಗ್ಯ ಇಲಾಖೆ ತಯಾರಿಸತೊಡಗಿದೆ.

NO COMMENTS

LEAVE A REPLY