ಕೋವಿಡ್ ನಿಯಂತ್ರಣ ಉಲ್ಲಂಘನೆ: ೩ ಮಂದಿ ವ್ಯಾಪಾರಿಗಳ ವಿರುದ್ಧ ಕೇಸು

0
34

ಕುಂಬಳೆ: ಕೋವಿಡ್ ನಿಯಂತ್ರಣ ಉಲ್ಲಂಘಿಸಿದ ೩ ಮಂದಿ ವ್ಯಾಪಾರಿಗಳ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಂಬಳೆ ಸಿಎಚ್‌ಸಿ ಆಸ್ಪತ್ರೆ ಬಳಿಯಲ್ಲಿ  ಕಾರ್ಯಾಚರಿಸುತ್ತಿರುವ ಜನರಲ್ ಸ್ಟೋರ್ ವ್ಯಾಪಾರಿ, ಕಂಚಿಕಟ್ಟೆ  ಮಾತೃಶ್ರೀ ನಿಲಯದ ಸಂತೋಷ್.ಕೆ (೩೮), ಕುಂಬಳೆ ಕುಂಟಂಗೇರಡ್ಕದಲ್ಲಿ ಕಾರ್ಯಾಚರಿಸುವ ದಿನಸಿ ಅಂಗಡಿ ವ್ಯಾಪಾರಿ, ಮಾವಿನಕಟ್ಟೆ ನಿವಾಸಿ ರಾಧಾಕೃಷ್ಣ (೪೯) ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಇವರು ೧೧ ಗಂಟೆಯ ಮೊದಲೇ ವ್ಯಾಪಾರ ಸಂಸ್ಥೆಯನ್ನು ತೆರೆದು ನಿಯಂತ್ರಣ ಉಲ್ಲಂಘಿಸಿರುವುದಾಗಿ ದೂರಿ ಕೇಸು ದಾಖಲಿಸಲಾಗಿದೆ. ಎಸ್.ಐ ಸಂತೋಷ್ ಕುಮಾರ್ ಕ್ರಮ ಕೈಗೊಂಡಿದ್ದಾರೆ. ಮಳ್ಳಂಗೈಯಲ್ಲಿರುವ ಖದೀಜ ಟ್ರೇಡರ್ಸ್ ವ್ಯಾಪಾರಿ  ಮಳ್ಳಂಗೈ ನಿವಾಸಿ ಯೂಸಫ್ (೩೬) ಎಂಬವರ ವಿರುದ್ಧವೂ ಕೇಸು ದಾಖಲಿಸಿದ್ದಾರೆ. ಇವರ ಸಂಸ್ಥೆಯಲ್ಲಿ  ಸಾಮಾಜಿಕ ಅಂತರ ಪಾಲನೆ ಮಾಡದ ಹಿನ್ನೆಲೆಯಲ್ಲಿ  ಎಸ್.ಐ ರಾಜೀವನ್ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY