ಬ್ಲಾರ್ಕೋಡ್‌ನಲ್ಲಿ ಲೀಗ್-ನೇಶನಲ್‌ಲೀಗ್ ಮಧ್ಯೆ ಘರ್ಷಣೆ: ಎನ್.ವೈ.ಎಲ್ ನೇತಾರ ಆಸ್ಪತ್ರೆಯಲ್ಲಿ

0
143

ಎರಿಯಾಲ್: ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಎರಿಯಾಲ್ ಬ್ಲಾರ್ಕೋಡ್‌ನಲ್ಲಿ ಮುಸ್ಲಿಂಲೀಗ್-ನೇಶನಲ್ ಯೂತ್ ಲೀಗ್ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿಎನ್.ವೈ.ಎಲ್ ಪಂಚಾಯತ್ ಪ್ರಧಾನ ಕಾರ್ಯದರ್ಶಿ  ಬ್ಲಾರ್ಕೋಡ್‌ನ ನೌಶಾದ್ ಅಹಮ್ಮದ್ (೩೪) ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಐದು ಮಂದಿ ಲೀಗ್ ಕಾರ್ಯಕರ್ತರ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಲೀಗ್ ಕಾರ್ಯಕರ್ತರಾದ ತಾಜುದ್ದೀನ್, ರಫೀಕ್, ಶಂಸುದ್ದೀನ್,  ರಂಶೀದ್, ಸಮದ್ ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.   ವ್ಯಕ್ತಿಯೋ ರ್ವರ  ಹಿತ್ತಿಲಲ್ಲಿ ಚರಂಡಿ ನಿರ್ಮಿಸು ವುದನ್ನು ಪ್ರಶ್ನಿಸಿದುದಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ನೌಶಾದ್ ಅಹಮ್ಮದ್‌ರನ್ನು ತಂಡ ತಡೆದು ನಿಲ್ಲಿಸಿ ಹಲ್ಲೆಗೈದುದಾಗಿ ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY