ದೇಲಂಪಾಡಿ ಏರುಂಡದಲ್ಲಿ ಕಾಡಾನೆ ದಾಳಿ: ವ್ಯಾಪಕ ಕೃಷಿ ನಾಶ

0
28

ಮುಳ್ಳೇರಿಯ: ದೇಲಂಪಾಡಿ ಪಂಚಾಯತ್‌ನ ಗಡಿ ಪ್ರದೇಶವಾದ ಏರುಂಡ ಎಂ ಬಲ್ಲಿ ನಿನ್ನೆ ಕಾಡಾನೆಗಳು ದಾಳಿ ನಡೆಸಿವೆ. ಎರುಂಡದ ರಾಮ ಎಂಬವರ ೧೫೦ರಷ್ಟು ಕಂ ಗಿನ ಗಿಡಗಳು, ಬಾಳೆ, ತೆಂಗಿನಗಿಡಗಳನ್ನು ಕಾಡಾನೆಗಳು ನಾಶಗೊಳಿಸಿವೆ. ನಿನ್ನೆ ರಾತ್ರಿ ೧೦ ಗಂಟೆಗೆ ಕಾಡಾನೆಗಳು ಕೃಷಿ ಸ್ಥಳಕ್ಕೆ ದಾಳಿಯಿಟ್ಟಿವೆ. ಇಂದು ಮುಂಜಾನೆ ೪ ಗಂಟೆವರೆಗೆ ಈ ಭಾಗದಲ್ಲಿ ವ್ಯಾಪಕ ನಾಶಗೊಳಿಸಿವೆಯೆಂದು ಕೃಷಿಕರು ತಿಳಿಸುತ್ತಿದ್ದಾರೆ. ಕಾಡಾನೆಗಳ ಉಪ ಟಳದಿಂದ ನಾಡಿನಲ್ಲಿ ಭೀತಿ ಸೃಷ್ಟಿಯಾಗಿದೆ. ವಿಷಯವನ್ನು ಅರಣ್ಯಾಧಿಕಾರಿಗಳಿಗೆ  ತಿಳಿಸಿ ರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ಭಾರೀ ಸಂದಿಗ್ಧತೆ ಎದುರಿಸುವ ಜನರಿಗೆ ಕಾಡಾನೆಗಳ ಹಾವಳಿ ಹಾಗೂ ಕೃಷಿ ನಾಶದಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ.

NO COMMENTS

LEAVE A REPLY