ಉಸಿರಾಟ ಸಂಬಂಧ ರೋಗದಿಂದ ಮಹಿಳೆ ಮೃತ್ಯು

0
101

ಮಂಜೇಶ್ವರ: ಉಸಿರಾಟ ಸಂಬಂಧ ರೋಗದಿಂದ ಬಳಲುತ್ತಿದ್ದ ಮಹಿಳೆ ನಿಧನಹೊಂದಿದರು. ಕುಂಜತ್ತೂರು ಪ್ಲಾಟ್‌ನಲ್ಲಿ ವಾಸಿಸುತ್ತಿದ್ದ ದಿ| ಸುಲೈಮಾನ್‌ರ ಪತ್ನಿ ಖದೀಜಮ್ಮ (೫೫) ನಿಧನಹೊಂದಿದರು. ಇವರಿಗೆ ಮೊನ್ನೆ ಉಸಿರಾಟ ಸಂಬಂಧ ಅಸೌಖ್ಯ  ಉಂಟಾದ ಹಿನ್ನೆಲೆಯಲ್ಲಿ ಉಪ್ಪಳದ ಖಾಸಗಿ ಆಸ್ಪತ್ರೆಗೂ, ಬಳಿಕ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಗೂ ತಲುಪಿಸಲಾಗಿತ್ತು. ಆದರೆ ನಿನ್ನೆ ಬೆಳಿಗ್ಗೆ ಮೃತಪಟ್ಟರು. ಆ ಬಳಿಕ ನಡೆಸಿದ ತಪಾಸಣೆಯಲ್ಲಿ ಇವರಿಗೆ ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಕೋವಿಡ್ ನಿಯಂತ್ರಣ ಪಾಲಿಸಿ ನಡೆಸಲಾಗಿದೆ. ಮೃತರು ಮಕ್ಕಳಾದ ಮೊಹಮ್ಮದ್ ಹನೀಫ್, ಅಮೀನಾ ಅನೀಸ್, ಅಳಿಯ ಅಶ್ರಫ್, ಸೊಸೆ ನೌಸೀನ್, ಸಹೋದರರಾದ ಸಲೀಂ, ಗಫೂರ್, ರಹೀಂ, ಸಹೋದರಿಯರಾದ ನಬಿಸ, ಮೈಮೂನ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY