ಕೋವಿಡ್: ದೇಶದಲ್ಲಿ ಮತ್ತೆ ೭೬೪ ಮಂದಿ ಮೃತ್ಯು

0
107

ದೆಹಲಿ: ದೇಶದಲ್ಲಿ ಕೋವಿಡ್ ರೋಗ ಬಾಧಿತರ ಸಂಖ್ಯೆಯಲ್ಲಿ ನಿನ್ನೆಯೂ ಭಾರೀ ಹೆಚ್ಚಳವುಂಟಾ ಗಿದೆ. ಕೇಂದ್ರ ಆರೋಗ್ಯ ಸಚಿವಾ ಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕಳೆದ ೨೪ ಗಂಟೆಯೊಳಗೆ ೫೭,೧೧೭ ಮಂದಿಗೆ ರೋಗ ಬಾಧಿಸಿರುವುದಾಗಿ ತಿಳಿಸಲಾಗಿದೆ.  ಇದೇ ವೇಳೆ ೭೬೪ ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರೋಗ ಬಾಧಿತರ ಒಟ್ಟು ಸಂಖ್ಯೆ ೧೬,೯೫,೯೮೮ ಕ್ಕೇರಿದೆ. ಒಟ್ಟು ೩೬,೫೧೧ ಮಂದಿ ಮೃತಪಟ್ಟಿದ್ದಾರೆ. ಇದೀಗ ೫,೬೫,೧೦೩ ಮಂದಿ ಚಿಕಿತ್ಸೆಯಲ್ಲಿದ್ದು, ೧೦,೯೪,೩೭೧ ಮಂದಿ ರೋಗ ಮುಕ್ತರಾಗಿದ್ದಾರೆ.  ನಿನ್ನೆ ಮಾತ್ರ ದೇಶದಲ್ಲಿ ೫,೨೫,೬೮೯ ಮಂದಿಯ ತಪಾಸಣೆ ನಡೆಸಲಾಗಿದೆ.

NO COMMENTS

LEAVE A REPLY