ಹಳದಿಲೋಹದ ಬೆಲೆ ನಿಯಂತ್ರಣಾತೀತವಾಗಿ ಗಗನಕ್ಕೆ

0
127

ಕೊಚ್ಚಿ: ದಾಖಲೆಗಳನ್ನು ಹುಡಿಗಟ್ಟಿ ಚಿನ್ನದ ಬೆಲೆ ಮತ್ತೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಚಿನ್ನದ ಬೆಲೆ ೪೦೧೬೦ಕ್ಕೆ ತಲುಪಿದೆ. ನಿನ್ನೆ ಪವನ್‌ಗೆ ೨೮೦ ರೂ. ಹೆಚ್ಚಾಗಿದೆ. ಗ್ರಾಂಗೆ ೭೫ ರೂ.ನಂತೆ ಏರಿಕೆಯಾಗಿ ೫೦೦೦ಕ್ಕೆ ತಲುಪಿದೆ. ಅದು ಇಂದು ೫೦೨೦ಕ್ಕೇರಿದೆ. ಕೋವಿಡ್ ನಿಂದಾಗಿರುವ ಮಾರುಕಟ್ಟೆಯ ನಿಸ್ತೇಜಸ್ಥಿತಿ, ಡಾಲರ್‌ನ ಕುಸಿತ, ಯು.ಎಸ್. ಚೈನಾ ಘರ್ಷಣೆ  ಎಂಬಿವುಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಠೇವಣಿದಾರರು ಹೆಚ್ಚಾಗಿ ಸುರಕ್ಷಿತವಾದ ಚಿನ್ನದತ್ತ ತಿರುಗುತ್ತಿರುವುದು ಬೆಲೆ ಹೆಚ್ಚಾಗಲು ಕಾರಣವಾಗಿದೆ.

ಜನವರಿ ೧ರಂದು ೨೯,೦೦೦ ರೂ. ಇದ್ದ ಚಿನ್ನದ ಬೆಲೆ ೭ ತಿಂಗಳಲ್ಲಿ ೧೧,೦೦೦ ರೂ. ಹೆಚ್ಚಿದೆ. ಜುಲೈ ೨೧ರಿಂದ ೧೧ ದಿನದಲ್ಲಿ ೩೨೪೦ ರೂ. ಹೆಚ್ಚಾಗಿದೆ. ೨೦೧೧ ಆಗಸ್ಟ್‌ನಲ್ಲಿ ಚಿನ್ನದ ಬೆಲೆ ಪವನ್‌ಗೆ ೨೦,೦೦೦ ರೂ. ಆಗಿತ್ತು. ಅದೀಗ ಇಮ್ಮಡಿಗೂ ಹೆಚ್ಚಾಗಿದೆ.

NO COMMENTS

LEAVE A REPLY