ಕೋವಿಡ್:ರಾಜ್ಯ ಪೊಲೀಸ್ ಕಚೇರಿ ಮುಚ್ಚುಗಡೆ; ರಾಜ್ಯದಲ್ಲಿ ಎಸ್.ಐ, ರಾಜಕೀಯ ನೇತಾರ ಸಹಿತ ಮತ್ತೆ ಮೂವರು ಮೃತ್ಯು

0
34

ತಿರುವನಂತಪುರ: ಪೊಲೀಸ್ ಅಧಿಕಾರಿ, ರಾಜಕೀಯ ನೇತಾರ ಸಹಿತ ಮೂರು ಮಂದಿ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟರು.

ಇಡುಕ್ಕಿ ಸ್ಪೆಷಲ್ ಬ್ರಾಂಚ್ ಎಸ್‌ಐ ಪಿ.ವಿ. ಅಜಿತನ್(೫೫), ಸೋಶ್ಯಲಿಸ್ಟ್ ನೇತಾರ ಎರ್ನಾಕುಳಂ ಆಲುಂಗಾಲ್‌ನ ದೇವಸಿ (೮೦) ಹಾಗೂ ಮಲಪ್ಪುರಂ ಪೆರುವಳ್ಳೂರು ಕಡಂಬೋಡಿನ ನಿವಾಸಿ ಕೋಯಾಮು (೮೨) ಎಂಬವರ  ನಿಧನ ಇಂದು ಖಚಿತಪಡಿಸಲಾಗಿದೆ. ಎಸ್‌ಐ ಅಜಿತನ್ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ, ದೇವಸಿ ಎರ್ನಾಕುಳಂನ ಆಸ್ಪತ್ರೆಯಲ್ಲಿ, ಕೋಯಾಮು ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎಸ್‌ಐ ಅಜಿತನ್‌ರ ಪತ್ನಿ  ಚೆರುತೋಣಿಯಲ್ಲಿ   ಬ್ಯೂಟೀಶಿಯನ್ ಸಂಸ್ಥೆ ನಡೆಸುತ್ತಿದ್ದಾರೆ. ಈಮಧ್ಯೆ ಇವರಿಗೆ ಕೋವಿಡ್ ಬಾಧಿಸಿದ್ದು, ಇವರಿಂದ  ಪತಿಗೆ ರೋಗ  ಹರಡಿದೆಯೆಂದು  ಸಂಶಯಿಸಲಾಗಿದೆ. ಅಜಿತನ್ ಹೃದಯ ಸಂಬಂಧ ಅಸೌಖ್ಯದಿಂದ ಚಿಕಿತ್ಸೆ ಯಲ್ಲಿದ್ದರು. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್ ಬಾಧಿಸಿ ಮೃತಪಟ್ಟಿರುವುದು ಇದೇ ಮೊದಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ೮೮ ಮಂದಿ ಪೊಲೀಸರು ಕೋವಿಡ್ ರೋಗ ಬಾಧಿತರಾಗಿ ದ್ದಾರೆಂದು ತಿಳಿದುಬಂದಿದೆ.

 

NO COMMENTS

LEAVE A REPLY