ನಾಲ್ಕು ಕಿಲೋ ಗಾಂಜಾ, ಮೊಬೈಲ್ ಫೋನ್, ಆಧಾರ್ ಕಾರ್ಡ್ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

0
47

ಪೆರ್ಲ: ಕಾಟುಕುಕ್ಕೆ ಸೂರ್ಡೇಲುನಲ್ಲಿ ೪ ಕಿಲೋ ೫೦ ಗ್ರಾಂ ಗಾಂಜಾ, ೨ ಮೊಬೈಲ್ ಫೋನ್ ಹಾಗೂ ಒಂದು ಆಧಾರ್ ಕಾರ್ಡ್ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಗರಿಕರು ತಿಳಿಸಿದ ಮಾಹಿತಿ ಮೇರೆಗೆ ಬದಿಯಡ್ಕ ಪೊಲೀಸರು ತಲುಪಿ ಇವುಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ಕಣ್ಣೂರು ಚೊವ್ವ ಎಂಬಲ್ಲಿನ ನಮೀತ್ ಎಂಬಾತನ   ಹೆಸರಿನಲ್ಲಿದೆ. ಆಧಾರ್ ಕಾರ್ಡ್, ಫೋನ್‌ಗಳು ಹಾಗೂ ಗಾಂಜಾ ವನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಉಪೇಕ್ಷಿಸಲ್ಪಟ್ಟ ಗಾಂಜಾ, ಮೊಬೈಲ್ ಹಾಗೂ ಆಧಾರ್ ಕಾರ್ಡ್ ಒಂದು ಬ್ಯಾಗ್‌ನಲ್ಲಿತ್ತು. ಪೊಲೀಸರು ತಲುಪುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇವುಗಳನ್ನು ಉಪೇಕ್ಷಿಸಿ ಪರಾರಿಯಾಗಿರಬಹುದೆಂದು ಸಂಶಯಿಸಲಾಗುತ್ತಿದೆ. ಈಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.

ಕೋವಿಡ್ ಮರೆಯಲ್ಲಿ ಕುಂಬಳೆ ಭಾಗದಿಂದ ಬಂದವರು ಇವುಗಳನ್ನು ಉಪೇಕ್ಷಿ ಸಿರಬಹುದೆಂದು ಪೊಲೀಸರು ಸಂಶಯಿಸುತ್ತಿ ದ್ದಾರೆ. ಗಾಂಜಾ ಹಾಗೂ ಫೋನ್‌ನ್ನು ಕಸ್ಟಡಿಗೆ ತೆಗೆದ ಬಳಿಕ ಫೋನ್‌ಗೆ ಬಂದ ಕರೆಗಳು ಉಪ್ಪಳ ಹಾಗೂ ಕುಂಬಳೆಯಲ್ಲಿದ್ದವ ರೆಂದು ಪೊಲೀಸರು ಸಂಶಯಿಸುತ್ತಿದ್ದಾರೆ.

NO COMMENTS

LEAVE A REPLY