ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಮೃತ್ಯು

0
84

ನೆಲ್ಲಿಕಟ್ಟೆ: ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಹತ್ತರ ಹರೆಯದ ಬಾಲಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬೆಳಿಂಜ ನಿವಾಸಿಯೂ, ನೆಲ್ಲಿಕಟ್ಟೆಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ನಾಸರ್-ಫೌಸಿಯಾ ದಂಪತಿಯ ಪುತ್ರಿ ನೌಫಿಯ ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ.  ನಿನ್ನೆ ಮಧ್ಯಾಹ್ನ ವೇಳೆಈ ದುರ್ಘಟನೆ ಸಂಭವಿಸಿದೆ. ಉಯ್ಯಾಲೆ ಯಲ್ಲಿ ಆಟವಾಡುತ್ತಿದ್ದಂತೆ ಅದರ ಹಗ್ಗ ಕುತ್ತಿಗೆಗೆ ಸಿಲುಕಿಕೊಂ ಡಿರುವುದಾಗಿ ಹೇಳಲಾಗುತ್ತಿದೆ. ಮೃತ ಬಾಲಕಿ ಸಹೋದರ-ಸಹೋದರಿಯರಾದ ಮುಶೀದ್, ಮುಫೀದ, ನಪ್ಸಿಯ, ನಫ್‌ಳ ಮೊದಲಾದವರನ್ನು ಅಗಲಿದ್ದಾಳೆ.

NO COMMENTS

LEAVE A REPLY