ತೆಕ್ಕಿಲ್, ಮಾಯಿಪ್ಪಾಡಿಯಿಂದ ಮದ್ಯ, ಶ್ರೀಗಂಧ ವಶ

0
51

ಕಾಸರಗೋಡು: ತೆಕ್ಕಿಲ್ ಕುನ್ನಾರದ ವಿಲಾಸಿನಿ ಎಂಬವರ ಮನೆ ಬಳಿಯಿಂದ ೨೦ ಪ್ಯಾಕೆಟ್ ವಿದೇಶ ಮದ್ಯ ವಶಪಡಿಸಿಕೊಂಡಿರುವುದಾಗಿ ಕಾಸರಗೋಡು ರೇಂಜ್ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಲಾಸಿನಿ ವಿರುದ್ದ ಕೇಸು ದಾಖಲಿಸಲಾಗಿದೆ.

ಮಾಯಿಪ್ಪಾಡಿ ಪನೀರ್‌ಕೋಡ್ ಎಂಬಲ್ಲಿ ಜನವಾಸವಿಲ್ಲದ ಮನೆಯಿಂದ ೪೩.೨ ಲೀಟರ್ ಕರ್ನಾಟಕ  ಮದ್ಯ ವಶಪಡಿಸಲಾಗಿದೆ. ಮದ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸುಮಾರು ೨೪೦ ಪ್ಯಾಕೆಟ್  ಮದ್ಯವಿತ್ತೆನ್ನಲಾಗಿದೆ. ಇದೇ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿಸಿಟ್ಟ ೨೪ ಕಿಲೋ ಶ್ರೀಗಂಧವನ್ನು ವಶಪಡಿಸಲಾಗಿದೆ.

NO COMMENTS

LEAVE A REPLY