ಇರಿತದಿಂದ ಯುವಕನಿಗೆ ಗಂಭೀರ ಗಾಯ: ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
40

ಹೊಸದುರ್ಗ: ಮದ್ಯಪಾನದ ಮಧ್ಯೆ ಉಂಟಾದ ವಿವಾದದ ಕೊನೆಯಲ್ಲಿ ಯುವಕನಿಗೆ ಇರಿದು ಗಾಯಗೊಳಿಸಲಾಗಿದೆ. ಘಟನೆಯ ಬಳಿಕ ಸ್ಥಳದಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕಂಗಿನ ತೋಟದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.

ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ, ಪಡಲಂ  ತೊಡಂಜಾಲ್ ಕಾಲನಿಯ ರವಿ  ಅಲಿಯಾಸ್ ಕೀರಿ ರವಿ (೪೮) ಮೃತಪಟ್ಟ ವ್ಯಕ್ತಿ. ಈತನ ಗೆಳೆಯ ಕೂಳಿಪ್ಪಾರದ ಕಣ್ಣನ್ (೪೯)ನಿಗೆ ಎದೆಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಉಂಟಾದ ಘಟನೆಯ ಬಗ್ಗೆ ವೆಳ್ಳೆರಿಕುಂಡ್ ಪೊಲೀಸರು ಹಾಗೂ ಸ್ಥಳೀಯರು ಈ ರೀತಿ ತಿಳಿಸುತ್ತಾರೆ: “ಕೂಲಿ ಕಾರ್ಮಿಕರಾದ ಕಣ್ಣನ್ ಹಾಗೂ ಕೀರಿ ರವಿ ನಿಕಟ ಗೆಳೆಯರಾ ಗಿದ್ದರು. ಕಣ್ಣನ್ ಕೂಳಿಪ್ಪಾರದ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸ. ನಿನ್ನೆ ರಾತ್ರಿ ಮನೆಯಲ್ಲಿ  ಕಣ್ಣನ್ ಹಾಗೂ ರವಿ ಜೊತೆಯಾಗಿ ಮದ್ಯ ಸೇವಿಸಿದ್ದರು.  ಅಮಲು ಹೆಚ್ಚಾದಾಗ ಇವರಿಬ್ಬರ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ಮಧ್ಯೆ ಗೆಳೆಯನಾದ ಕಣ್ಣನ್‌ನಿಗೆ ಇರಿದು ಗಾಯಗೊಳಿಸಿದ್ದನು.  ಪತ್ನಿಯ  ಬೊಬ್ಬೆ ಕೇಳಿ ಓಡಿ ತಲುಪಿದವರು ಇರಿತದಿಂದ ಗಾಯಗೊಂಡಿದ್ದ ಕಣ್ಣನ್‌ನನ್ನು ಆಸ್ಪತ್ರೆಗೆ  ತಲುಪಿಸಿದ್ದರು. ಈ ಮಧ್ಯೆ ಇಲ್ಲಿಂದ ಪರಾರಿಯಾಗಿದ್ದ ರವಿ ನಾಪತ್ತೆಯಾಗಿದ್ದನು. ಮನೆಗೆ ಹಿಂತಿರುಗದ ಕಾರಣ ಈತನಿಗಾಗಿ ಹುಡುಕಾಡುತ್ತಿದ್ದ ಮಧ್ಯೆ ಮನೆ ಮುಂಭಾಗದಲ್ಲಿರುವ ಕಂಗಿನ ತೋಟದಲ್ಲಿ ಇಂದು ಬೆಳಿಗ್ಗೆ ಮೃತದೇಹ  ಪತ್ತೆಯಾಗಿದೆ.   ಕಾವಿ ಮುಂಡು ಹಾಗೂ ಕೆಂಪು  ಅಂಗಿ ಧರಿಸಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸ್ಥಳದಲ್ಲಿ ರಕ್ತದ ಗುರುತು ಇದೆ.  ಮಹಜರು ನಡೆಸಿದ  ಬಳಿಕವೇ ದೇಹದ ಮುಂಭಾಗದಲ್ಲಿ ಉಂಟಾಗಿರುವ ಗಾಯದ ಸ್ಪಷ್ಟವಾದ ಕಾರಣ ತಿಳಿಯಲಿದೆ”. ಮಾಹಿತಿ ತಿಳಿದು ವೆಳ್ಳೇರಿಕುಂಡ್ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಪ್ರೇಮ್ ಸದನ್‌ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY