ಕೋವಿಡ್: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅನಿರ್ದಿಷ್ಟಾವಧಿ ಮುಚ್ಚುಗಡೆ

0
50

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅನಿರ್ದಿಷ್ಟಾವಧಿಗೆ ಮುಚ್ಚುಗಡೆಗೊ ಳಿಸಲಾಗಿದೆ. ಬಸ್ ಡಿಪೋದ ಇಬ್ಬರು ಕಂಡಕ್ಟರ್‌ಗಳಿಗೆ ನಿನ್ನೆ ಕೋವಿಡ್ ರೋಗ ಖಚಿತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳ ಲಾಗಿದೆ. ಇದೇ ವೇಳೆ ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್ ಕೆಎಸ್‌ಆರ್‌ಟಿಸಿ ನಿಲ್ದಾಣಗಳಿಂದ ಬರುವ ಬಸ್‌ಗಳು ಕಾಸರಗೋಡು ಹೊಸ ಬಸ್ ನಿಲ್ದಾಣವರೆಗೆ ಸಂಚರಿಸುತ್ತಿವೆ. ಮೊನ್ನೆ ಓರ್ವ ಮೆಕ್ಯಾನಿಕ್‌ಗೆ ಕೋವಿಡ್ ಖಚಿತ ಪಡಿಸಿದ ಹಿನ್ನೆಲೆಯಲ್ಲಿ ನಿನ್ನೆ ಕಾಸರ ಗೋಡು ಬಸ್ ನಿಲ್ದಾಣ ಮುಚ್ಚುಗಡೆ ಗೊಳಿಸಿ ಅಣುಮುಕ್ತಗೊಳಿಸಲಾಗಿತ್ತು.

NO COMMENTS

LEAVE A REPLY