ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಆಕ್ರಮಣ: ೪ ಮಂದಿ ವಿರುದ್ಧ ಹತ್ಯೆಯತ್ನ ಕೇಸು

0
215

ಮಾನ್ಯ: ಕೊಲ್ಲಂಗಾನದಲ್ಲಿ ಬೈಕ್ ಸವಾರನನ್ನು ತಡೆದು ನಿಲ್ಲಿಸಿದ ತಂಡ ಆಕ್ರಮಣಗೈದ ಬಳಿಕ ಚಾಕು ತೋರಿಸಿ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿ ನಾಲ್ಕು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಹತ್ಯೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.

ಎರ್ದುಂಕಡವು ನಿವಾಸಿಗಳಾದ ಫಾಯಿಸ್, ಪಚ್ಚು ಎಂಬಿವರ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಕ್ರಣದಲ್ಲಿ ಕೊಲ್ಲಂಗಾನದ ಪ್ರಶಾಂತ್, ಶ್ರೀಜಿತ್ ಎಂಬಿವರು ಗಾಯಗೊಂಡಿದ್ದಾರೆ.  ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY