ತೆಂಗಿನ ಮರದಿಂದ  ಬಿದ್ದು ಕಾರ್ಮಿಕ ಮೃತ್ಯು

0
59

ಹೊಸದುರ್ಗ: ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಮೃತಪಟ್ಟರು.ವೆಳ್ಳಿಕೋತ್ ವೀಣಚ್ಚೇ ರಿಯ ಗಣೇಶನ್ (೪೫) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ವೆಳ್ಳಿಕ್ಕೋತ್ ಅಳಿಕ್ಕೋಡ್‌ನ ಸ್ಮಾರಕ ಮಂದಿರ ಸಮೀಪದ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಕೆಲಸ ಮಧ್ಯೆ ದುರ್ಘಟನೆ  ಸಂಭವಿಸಿದೆ. ಕೂಡಲೇ ಕುನ್ನುಮ್ಮಲ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ದಿ| ಕುಂಞಿರಾಮನ್-ಚೋಯಿಚ್ಚಿ ದಂಪತಿಯ ಪುತ್ರನಾದ ಗಣೇಶನ್ ಪತ್ನಿ ಪ್ರಸನ್ನ, ಮಕ್ಕಳಾದ ನೀತು, ಜಿತಿನ್, ಸಹೋದರ-ಸಹೋ ದರಿಯರಾದ ರಾಘವನ್ (ಆಟೋ ಚಾಲಕ ಪೂಚ ಕ್ಕಾಡ್), ಕಾರ್ತ್ಯಾಯಿನಿ, ಶಿವನ್, ಗಂಗಾಧ ರನ್, ನಾರಾಯಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY