ಕಾಸರಗೋಡಿನಲ್ಲಿ ಎರಡು ಖಾಸಗಿ ಬಸ್‌ಗಳ ಸಂಚಾರ ಪುನರಾರಂಭ: ಬಸ್ ಮಾಲಕರ ಸಭೆ ಶನಿವಾರ

0
73

 

ಕಾಸರಗೋಡು: ಕಾಸರಗೋ ಡಿನಲ್ಲಿ ಎರಡು ಖಾಸಗಿ ಬಸ್‌ಗಳು ಇಂದು ಸಂಚಾರ ಆರಂಭಿಸಿವೆ. ಕಾಸರಗೋಡು-ಬದಿಯಡ್ಕ ರೂಟ್‌ನಲ್ಲಿಸಂಚರಿಸುವ ವಿ.ಪಿ. ಟ್ರಾವೆಲ್ಸ್, ಕಾಞಂಗಾಡ್‌ಗೆ ತೆರಳುವ ಹುದಾ ಬಸ್ ಇಂದು ಸಂಚಾರ ಪುನರಾರಂಭಿಸಿದೆ.

ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣ ಮೂಲಕ ಬಸ್‌ಗಳು ಸಂಚರಿಸುತ್ತಿವೆ. ಬಸ್‌ಗೆ ಪ್ರಯಾಣಿಕರು ತಲುಪುವುದಕ್ಕೆ ಅನುಸರಿಸಿ ಪ್ರಯಾಣ ಹೊರಡುವು ದಾಗಿ ನೌಕರರು ತಿಳಿಸಿದ್ದಾರೆ.

ಇದೇ ವೇಳೆ ಶನಿವಾರ ಬಸ್ ಮಾಲಕರ ಅಸೋಸಿಯೇಶನ್ ಜಿಲ್ಲಾ ಸಮಿತಿ ಸಭೆ ನಡೆಯಲಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯ ನಿರ್ಧಾರ ವನ್ನನುಸರಿಸಿ ಅಸೋಸಿಯೇಶನ್ ಸಭೆ ಮುಂದಿನ ನಿರ್ಧಾರ  ಕೈಗೊಳ್ಳಲಿದೆಯೆಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ.

ಜುಲೈ ೧ರಿಂದ ಸೆಪ್ಟಂಬರ್ ೩೦ರ ವರೆಗೆ ತೆರಿಗೆ ಹೊರತು ಪಡಿಸಬೇಕೆಂದು ಬಸ್ ಮಾಲಕರ ಅಸೋಸಿಯೇಶನ್ ಈ ಹಿಂದೆಯೇ ರಾಜ್ಯ ಸರಕಾರವನ್ನು ಒತ್ತಾಯಿಸಿತ್ತು. ಈ ಬೇಡಿಕೆಯನ್ನು ಇಂದು ನಡೆಯುವ ಸಚಿವ ಸಂಪುಟ ಸಭೆ ಅಂಗೀಕರಿ ಸಲಿದೆಯೆಂದು ಬಸ್ ಮಾಲಕರು ನಿರೀಕ್ಷೆಯಿರಿಸಿದ್ದಾರೆ. ಅನುಕೂಲ ನಿಲುವು ಉಂಟಾದರೆ ಬಸ್ ಸಂಚಾರ ಪುನರಾರಂಭಿಸ ಲಾಗುವುದು.

ಇಲ್ಲದಿದ್ದಲ್ಲಿ ಶನಿವಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳು ವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

NO COMMENTS

LEAVE A REPLY