ಬೆಂಗಳೂರಲ್ಲಿ ಭುಗಿಲೆದ್ದ ಹಿಂಸೆ: ಗುಂಡಿಗೆ ಮೂವರು ಬಲಿ

0
43

ಬೆಂಗಳೂರು: ಕಾಂಗ್ರೆಸ್ ಶಾಸಕನ ಸಂಬಂಧಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವಿವಾದದಲ್ಲಿ ಬೆಂಗ ಳೂರುನಲ್ಲಿ ಘರ್ಷಣೆ ಸೃಷ್ಟಿಯಾಗಿದೆ. ಆಕ್ರಮಣದಲ್ಲಿ ೩ ಮಂದಿ ಮೃತಪಟ್ಟಿ ದ್ದಾರೆ. ಬೆಂಗಳೂರಿನಲ್ಲಿ ೧೪೪ ಸೆಕ್ಷನ್, ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ. ಶಾಸಕನ ಮನೆಗೆ ಅಕ್ರಮಿಗಳ ತಂಡ ಕಿಚ್ಚು ಹಚ್ಚಿದ್ದು, ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸುವಾಗ ಪೊಲೀಸರು ಗುಂಡು ಹಾರಿಸಿ ದರು. ಇದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ. ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಪೂರ್ವ ಬೆಂಗಳೂರಿನ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಎಂಬೆಡೆಗಳಲ್ಲಿ ನಿನ್ನೆ ರಾತ್ರಿ ಆಕ್ರಮಣ ನಡೆದಿದೆ. ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿ ಎಂಬವರ ಪತ್ನಿಯ ಸಹೋದರ ನವೀನ್ ಹಾಕಿದ ಪೋಸ್ಟ್‌ನಿಂದ ರೋಷಗೊಂಡ ತಂಡವೊಂದು  ಗಲಭೆ ಸೃಷ್ಟಿಸಿದೆ. ಈ ತಂಡ ಬೈರಸಾಂದ್ರದಲ್ಲಿರುವ ಶಾಸಕರ ಮನೆಗೆ ಆಕ್ರಮಣಗೈದಾಗ ಗಲಭೆ ಸೃಷ್ಟಿಯಾಗಿದೆ. ನೂರಾರು ಮಂದಿ ಗುಂಪಾಗಿ ಠಾಣೆ ಪರಿಸರದಲ್ಲಿ ಜಮಾಯಿಸಿದ್ದಾರೆ. ಬಳಿಕ ಠಾಣೆಗೆ ಕಲ್ಲೆಸೆತ ಉಂಟಾಗಿದೆ. ಅಲ್ಲದೆ ಅಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸಿದೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗುಂಡು ಹಾರಿಸಿದ್ದಾರೆ. ಇದರಲ್ಲಿ ಪೊಲೀಸರ ಸಹಿತ ಹಲವರಿಗೆ ಗಾಯ ಉಂಟಾಗಿದೆ. ಅಲ್ಲದೆ ಹಲವಾರು ವಾಹನಗಳಿಗೂ ಕಿಚ್ಚು ಹಚ್ಚಲಾಗಿದೆ. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಮನಗಂಡು ಹೆಚ್ಚುವರಿ ಸೇನೆಯನ್ನು ಅಲ್ಲಿ ನಿಯೋಜಿಸಲಾಗಿದೆ. ಈಗ ಘರ್ಷಣೆ ಹತೋಟಿಯಲ್ಲಿದೆ. ಜನರು ಶಾಂತಚಿತ್ತ ರಾಗಿರಬೇಕೆಂದೂ ಆಕ್ರಮಣ ಕೈಬಿಡ ಬೇಕೆಂದೂ ಮುಖ್ಯಮಂತ್ರಿ, ಶಾಸಕರು ಆಗ್ರಹಿಸಿದ್ದಾರೆ. ಅಕ್ರಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾತೆಯನ್ನು ಹ್ಯಾಕ್ ಮಾಡಿ ಯಾರೋ ಪೋಸ್ಟ್ ಹಾಕಿರುವುದಾಗಿ ನವೀನ್ ತಿಳಿಸಿದ್ದಾರೆ. ನವೀನ್ ಠಾಣೆಗೆ ಹಾಜರಾಗಿದ್ದಾರೆ. ಮುಹಮ್ಮದ್ ನಬಿಯ ಬಗ್ಗೆ ರಚಿಸಿದ ಕಾರ್ಟೂನ್ ಪೋಸ್ಟ್ ಮಾಡಿರುವುದೇ ಘಟನೆಗೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY