ಕೋವಿಡ್ ಪ್ರತಿರೋಧ: ಸ್ಟ್ಯಾನಿಟೈಸರ್ ಕುಡಿದು ಕೆ.ಎಸ್.ಆರ್.ಟಿ.ಸಿ ಚಾಲಕ ಗಂಭೀರ

0
42

ಕಾಸರಗೋಡು: ಸ್ಯಾನಿಟೈಸರ್ ಕೈಗೆ ಹಚ್ಚಿಕೊಂಡರೆ ಕೋವಿಡ್ ರೋಗ ತಗಲದಂತೆ ತಡೆಯಲು ಸಾಧ್ಯವಿದೆ ಯೆಂಬ ಸರಕಾರದ ನಿರ್ದೇಶದಿಂದ ಆಕರ್ಷಿತನಾದ ಕೆಎಸ್‌ಆರ್‌ಟಿಸಿ ಚಾಲಕನೋರ್ವ  ಸ್ಯಾನಿಟೈಸರ್ ಕುಡಿದ ಘಟನೆ ನಡೆದಿದೆ.

ಬಸ್ ನಿಲ್ದಾಣದಲ್ಲಿ ಅಸ್ವಸ್ಥನಾಗಿ ಕಂಡುಬಂದ ಚಾಲಕನನ್ನು ಜನರಲ್ ಆಸ್ಪತ್ರೆಗೆ ತಲುಪಿ ತಪಾಸಣೆ ನಡೆಸಿದಾಗಲೇ ಸ್ಯಾನಿಟೈಸರ್  ಸೇವಿಸಿ ರುವ ಬಗ್ಗೆ ಇವರು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ  ಕರೆದೊಯ್ಯುವಂತೆ ಜನರಲ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.  ಇದೀಗ ಇವರು ಪರಿಯಾರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.ತಿರುವನಂತಪುರ ನಿವಾಸಿ ಯಾದ ಜಿ. ಶಿಬು (೪೫) ಎಂಬವರು  ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾ ಗಿರುವ ವ್ಯಕ್ತಿ. ಡಿಪ್ಪೋದಲ್ಲಿ ಮೂವರು ನೌಕರರಿಗೆ ಕೋವಿಡ್ ಖಚಿತಪಡಿ ಸಲಾಗಿತ್ತು.  ಈ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪ್ರತಿರೋಧ ಶಕ್ತಿ ಹೆಚ್ಚಿಸಲು ಇವರು ಸ್ಯಾನಿಟೈಸರ್ ಕುಡಿದು ಪ್ರಯೋಗ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಕೆಎಸ್‌ಆರ್‌ಟಿಸಿ ಡಿಪ್ಪೋ ಮೂರು ದಿನಗಳಿಂದ ಮುಚ್ಚುಗಡೆಗೊ ಳಿಸಲಾಗಿದೆ. ಕೋವಿಡ್ ಕಾಲದಲ್ಲಿ ನಾಮಮಾತ್ರವಾಗಿ ನಡೆಸಿದ ಸರ್ವೀಸ್‌ನಲ್ಲೂ, ೮೦,೦೦೦ ರೂಪಾ ಯಿವರೆಗೆ ದೈನಂದಿನ ಆದಾಯ ಲಭಿಸಿರುವುದಾಗಿ ನೌಕರರು ತಿಳಿಸಿದ್ದಾರೆ. ಮೂರು ಮಂದಿ ನೌಕರರಿಗೆ ಕೋವಿಡ್ ಖಚಿತಪಡಿಸುವುದರೊಂದಿಗೆ ಅದು ಕೂಡಾ ಇಲ್ಲದಾಯಿತು.

NO COMMENTS

LEAVE A REPLY