ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತ್ಯು

0
85

ಉಪ್ಪಳ: ಅಪರಿಮಿತ ವೇಗದಲ್ಲಿ ಯದ್ವಾತದ್ವಾ ಕಾರು ಚಲಾಯಿಸಿದ ಪರಿಣಾಮ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸವಾರ, ಕೃಷಿಕ ಮೃತಪಟ್ಟ ಘಟನೆ ಬೇಕೂರಿನಲ್ಲಿ ಸಂಭವಿಸಿದೆ. ನಿನ್ನೆ ಸಂಜೆ ೫.೩೦ಕ್ಕೆ ಘಟನೆ ನಡೆದಿದ್ದು, ಸುಭಾಷ್‌ನಗರ ಬೊಳ್ಳಾರು ನಿವಾಸಿ ರಾಮ ಭಟ್ (೬೯) ಮೃತಪಟ್ಟವರು.

ಘಟನೆ ಹೀಗಿದೆ: ಸುಭಾಷ್‌ನಗರದಲ್ಲಿ ಓರ್ವಕಾರನ್ನು  ಯದ್ವಾತದ್ವಾ ಚಲಾಯಿಸಿ ಜನರಿಗೆ ಭೀತಿ ಸೃಷ್ಟಿಸುತ್ತಿದ್ದಾಗ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಕಾರಿನ ಚಾಲಕ ಅಪರಿಮಿತ ವೇಗದಿಂದ ಕಾರನ್ನು ಚಲಾಯಿಸಿದ್ದಾನೆ. ಕಾರು ನಿಯಂತ್ರಣ ತಪ್ಪಿ  ಬೇಕೂರು ಭಾಗಕ್ಕೆ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸದಲ್ಲಿ ಸ್ಕೂಟರ್ ನಜ್ಜುಗುಜ್ಜಾಗಿ, ಕಾರು ಸಮೀಪದ ಕಬ್ಬಿಣದ ಬೇಲಿಗೆ ತಾಗಿ ನಿಂತಿದೆ. ಇಲ್ಲಿಂದ ಕಾರನ್ನು ಉಪೇಕ್ಷಿಸಿ ಚಾಲಕ ಪರಾರಿಯಾಗಿ ದ್ದಾನೆ. ಗಂಭೀರ ಗಾಯಗೊಂಡ ರಾಮ ಭಟ್‌ರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗ ಲಿಲ್ಲ. ಕಾರು ಉಪೇಕ್ಷಿಸಿ ಪರಾರಿ ಯಾದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬೇಕೂರು ಪರಿಸರದಲ್ಲಿ ಸಾಮಾನ್ಯವಾಗಿ ಈ ವ್ಯಕ್ತಿ ಉಪಟಳ ನೀಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಪತ್ತೆಗಾಗಿ ತನಿಖೆ  ನಡೆಸ ಲಾಗುತ್ತಿದೆ. ರಾಮ ಭಟ್‌ರ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದ ಲ್ಲಿರಿಸಲಾ ಗಿದೆ. ಮೃತರು ಪತ್ನಿ ಶ್ಯಾಮಲಾ, ಮಕ್ಕಳಾದ ಮಧುಶ್ರೀ, ಸಿಂಧುಶ್ರೀ, ಅಳಿಯಂದಿರಾದ ಮುರಳಿ ಭಟ್, ವಿನಾಯಕ ಭಟ್, ಸಹೋದರಿ ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY