ತೆರಿಗೆದಾರರಿಗೆ ಪ್ರಯೋಜನಕರವಾಗುವ  ರೀತಿಯಲ್ಲಿ ಪರಿಷ್ಕಾರ- ಮೋದಿ

0
43

ದೆಹಲಿ: ದೇಶದ ಪ್ರಾಮಾಣಿಕರಾದ ತೆರಿಗೆದಾಯಕರಿಗೆ  ಗೌರವ ಸೂಚಿಸುವುದಕ್ಕಾಗಿ ಯೋಜನೆ ಹಮ್ಮಿಕೊಳ್ಳಲಾ ಗುವುದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ‘ಪಾರದರ್ಶಕ ತೆರಿಗೆ ಸಮರ್ಪಣೆ- ಪ್ರಾಮಾಣಿಕತೆಗೆ ಗೌರವ’ ಎಂಬ ಹೆಸರಿನಲ್ಲಿ ಯೋಜನೆ ಜ್ಯಾರಿಗೊಳಿಸಲಾಗುವುದೆಂದು ಪ್ರಧಾನಮಂತ್ರಿ ನುಡಿದರು. ತೆರಿಗೆ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಖಚಿತಪಡಿಸುವುದು, ತೆರಿಗೆದಾರರನ್ನು ಬಲಪಡಿಸುವುದು ಎಂಬೀ ಉದ್ದೇಶ ಮುಂದಿಟ್ಟುಕೊಂಡು ಈ ಯೋಜನೆಗೆ ನಾಂದಿ ಹಾಡಲಾಗಿದೆ ಎಂದವರು ನುಡಿದರು.

NO COMMENTS

LEAVE A REPLY