ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತ್ಯು

0
35

ಉಪ್ಪಳ:  ಕೆಲಸದ ಮಧ್ಯೆ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ. ಬಾಯಾರು ಚೇರಾಲ್ ನಿವಾಸಿ ದಿ| ನಾರಾಯಣ ನಾಯ್ಕರ ಪುತ್ರ  ರವಿಚಂದ್ರ (೪೦) ಮೃತಪಟ್ಟವರು. ಇವರು ನಿನ್ನೆ ಬೆಳಿಗ್ಗೆ ೮.೩೦ರ ವೇಳೆ ಮನೆ ಪರಿಸರದಲ್ಲಿ ವ್ಯಕ್ತಿಯೋರ್ವರ ಮರದಿಂದ ತೆಂಗಿನ ಕಾಯಿ ಕೀಳಲು ಮರ ಏರಲಾ ರಂಭಿಸುವಾಗ ತಲೆಸುತ್ತಿ ಬಿದ್ದಿದ್ದರೆನ್ನಲಾಗಿದೆ. ಪ್ರಜ್ಞೆ ಕಳೆದುಕೊಂಡ ಇವರನ್ನು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಜಯಂತಿ, ಪತ್ನಿ ಸರೋಜಿನಿ, ಮಕ್ಕಳಾದ ಸವಿತಾ, ಅವಿನಾಶ್, ಸಹೋದರ ಪ್ರಕಾಶ್, ಸಹೋದರಿ ವಸಂತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ದಿನೇಶ ಈ ಹಿಂದೆ ನಿಧನ ಹೊಂದಿದ್ದಾರೆ.

NO COMMENTS

LEAVE A REPLY