ಸದಸ್ಯನಿಗೆ ಕೋವಿಡ್: ಮುಳಿಯಾರು ಪಂಚಾಯತ್ ಒಂದು ವಾರ ಬಂದ್

0
29

ಬೋವಿಕ್ಕಾನ: ಸಿಪಿಎಂ ಮುಖಂಡನಾದ ಪಂಚಾಯತ್ ಸದಸ್ಯನಿಗೆ ಕೋವಿಡ್ ಖಚಿತಪಡಿಸುವುದರೊಂದಿಗೆ ಮುಳಿಯಾರು ಪಂಚಾಯತ್ ಕಚೇರಿಯನ್ನು ಒಂದುವಾರಕ್ಕೆ ಮುಚ್ಚಲಾಗಿದೆ. ಇತ್ತೀಚೆಗೆ ಕೋಟೂರಿನಲ್ಲಿ ನಡೆಸಿದ ಆಂಟಿಜೆನ್ ತಪಾಸಣೆಯಲ್ಲಿ ಪಂಚಾಯತ್ ಸದಸ್ಯನಿಗೂ, ಪತ್ನಿಗೂ, ಮಕ್ಕಳಿಗೂ ಕೋವಿಡ್ ಖಚಿತಪಡಿಸಲಾಗಿತ್ತು. ಪತ್ನಿ ದುಡಿಯುವ ಸಹಕಾರಿ ಸಂಸ್ಥೆಯನ್ನು ಕೂಡಾ ಒಂದು ವಾರಕ್ಕೆ ಮುಚ್ಚಲಾಗಿದೆ. ನೌಕರರಿಗೆ ಕೋವಿಡ್ ತಪಾಸಣೆ ನಡೆಸಿದ ಬಳಿಕ ಮಾತ್ರವೇ ಈ ಎರಡೂ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೊಂದಿಗೆ ಸಂಪರ್ಕ ಹೊಂದಿದ ಎಲ್ಲರೂ ಕೂಡಾ ನಿಗಾದಲ್ಲಿರಲು ಸೂಚಿಸಲಾಗಿದೆ. ಎರಿಂಜೇರಿ ಕಾಲನಿಯಲ್ಲಿ ಕೋವಿಡ್ ಉಂಟಾದಾಗ ಅಲ್ಲಿ ವ್ಯವಸ್ಥೆ ಏರ್ಪಡಿಸಲು ಇವರು ತೆರಳಿದ್ದು, ಅಲ್ಲಿಂದ ಕೋವಿಡ್ ತಗಲಿರಬಹು ದೆಂದು ಆರೋಗ್ಯ ಇಲಾಖೆ ಶಂಕಿಸಿದೆ.

NO COMMENTS

LEAVE A REPLY