ಸೆಲ್ಫಿ ಮಧ್ಯೆ ಸಮುದ್ರಕ್ಕೆ ಬಿದ್ದ ಮಗು ಮೃತ್ಯು

0
36

ಆಲಪ್ಪುಳ: ಸೆಲ್ಫಿ ತೆಗೆಯುತಿ ದ್ದಾಗ ತಾಯಿಯ ಕೈಯಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಎರಡೂವರೆ ವರ್ಷದ ಮಗುವಿನ ಮೃತದೇಹ ಪತ್ತೆಯಾಗಿದೆ.

ಪಾಲಕ್ಕಾಡ್ ಕಿಳಕ್ಕಂಚೇರಿಯ ಲಕ್ಷ್ಮಣನ್-ಅನಿತಾ ದಂಪತಿಯ ಪುತ್ರ ಆದಿಕೃಷ್ಣ ಎಂಬ ಮಗುವಿನ ಮೃತದೇಹ ಪತ್ತೆಯಾಗಿದೆ. ಆಲ ಪ್ಪುಳದಲ್ಲಿ ಸಂಬಂಧಿಕರ ಮನೆಯಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ತಲುಪಿತ್ತು. ಕಾರ್ಯಕ್ರಮದ ಬಳಿಕ ಸಮುದ್ರ ವೀಕ್ಷಿಸಲು ತೆರಳಿದ್ದರು. ಮತ್ತಿಬ್ಬರು ಮಕ್ಕಳೊಂದಿಗೆ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ಮಗು ಸಮುದ್ರಕ್ಕೆ ಬಿದ್ದಿತ್ತೆನ್ನಲಾಗಿದೆ. ಜತೆಗಿದ್ದ ಓರ್ವ ಇಬ್ಬರು ಮಕ್ಕಳನ್ನು ರಕ್ಷಿಸಿದರೂ ಆದಿಕೃಷ್ಣನನ್ನು ರಕ್ಷಿಸಲಾಗಲಿಲ್ಲ.

NO COMMENTS

LEAVE A REPLY