ಬೆಂಕಿ ತಗಲಿ ಕುಟುಂಬದ ಮೂರು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
35

ತಿರುವನಂತಪುರ: ಇಲ್ಲಿಗೆ ಸಮೀಪದ ವರ್ಕಲದಲ್ಲಿ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಮೃತದೇಹಗಳು ಸುಟ್ಟು ಕರಕಲಾಗಿದೆ. ತಂದೆ, ತಾಯಿ, ಪುತ್ರಿ ಮೃತಪಟ್ಟವರು. ವೆಟ್ಟೂರು ನಿವಾಸಿ ಶ್ರೀಕುಮಾರ್ (೬೦), ಪತ್ನಿ ಮಿನಿ (೫೫), ಪುತ್ರಿ ಅನಂತಲಕ್ಷ್ಮಿ (೨೬) ಮೃತಪಟ್ಟವರು.

ಮುಂಜಾನೆ ೩.೩೦ರ ವೇಳೆ ಈ ಮನೆಯಿಂದ ಬೊಬ್ಬೆ ಕೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮನೆಯಿಂದ ಹೊಗೆ ಬರುತ್ತಿರುವುದು ಕಂಡಿದ್ದಾರೆ. ಇವರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ  ಪೊಲೀಸರು, ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದ್ದು, ಈ ವೇಳೆ ಹೊತ್ತಿದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಕಂಡುಬಂದಿದೆ.  ಮಲಗಿದ್ದ ಸ್ಥಿತಿಯಲ್ಲೇ ಪತ್ನಿ, ಪುತ್ರಿಗೆ ಕಿಚ್ಚು ಹಚ್ಚಿ ಶ್ರೀಕುಮಾರ್ ಆತ್ಮಹತ್ಯೆ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಸಾಲ ಹೆಚ್ಚಾದ ಕಾರಣ ಕುಟುಂಬ ಸಂಕಷ್ಟದಲ್ಲಿತ್ತೆಂದು ನೆರೆಮನೆ ನಿವಾಸಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

NO COMMENTS

LEAVE A REPLY