ನ್ಯಾಶನಲ್ ಯೂತ್‌ಲೀಗ್‌ನಿಂದ ಮುಸ್ಲಿಂಲೀಗ್ ಜಿಲ್ಲಾ ಕಚೇರಿಗೆ ಮಾರ್ಚ್

0
744

ಕಾಸರಗೋಡು: ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಎಂ.ಸಿ. ಖಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನ್ಯಾಶನಲ್ ಯೂತ್‌ಲೀಗ್ ಕಾಸರಗೋಡು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಚೇರಿಗೆ ನಡೆಸಿದ ಮಾರ್ಚ್‌ನ್ನು ಎಂ.ಜಿ. ರಸ್ತೆಯಲ್ಲಿ ಪೊಲೀಸರು ತಡೆದರು. ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡ ಮಾರ್ಚ್ ಮುಸ್ಲಿಂ ಲೀಗ್ ಕಚೇರಿ ಬಳಿ ಪೊಲೀಸರು ತಡೆದಾಗ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಹೊ-ಕೈ ಉಂಟಾಗಿದೆ. ಬಳಿಕ ರಸ್ತೆಯಲ್ಲಿ ಕುಳಿತು ಕಾರ್ಯಕರ್ತರು ಪ್ರತಿಭಟಿಸಿದರು. ಮಾರ್ಚ್‌ಗೆ ನ್ಯಾಶನಲ್ ಯೂತ್‌ಲೀಗ್ ಜಿಲ್ಲಾಧ್ಯಕ್ಷ ಶೇಖ್ ಹನೀಫ, ಸಿದ್ದೀಕ್ ಚೇರಂಗೈ ಪಿ.ಎಚ್. ಹನೀಫ, ರಹೀಂ ಬೆಂಡಿಚ್ಚಾಲ್, ರಶೀದ್ ಬೇಕಲ್, ಹನೀಫ್, ಅನ್ವರ್ ಮೊದಲಾದವರು ನೇತೃತ್ವ ನೀಡಿದರು.

NO COMMENTS

LEAVE A REPLY