ಉದ್ಯಮಿ ನಿಧನ

0
62

ಕುಂಬಳೆ: ನಾಯ್ಕಾಪು ನಿವಾಸಿಯಾದ ಉದ್ಯಮಿ ಅಂಪ ನಾಯಕ್(೮೦) ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನಹೊಂದಿದರು.

ಸೀತಾಂಗೋಳಿ ಕಿನ್ಫ್ರಾ ಹಾಗೂ ನಾಯ್ಕಾಪುನಲ್ಲಾಗಿ ಒಟ್ಟು ಮೂರು ಆಯಿಲ್ ಆಂಡ್ ಫ್ಲೋರ್ ಮಿಲ್‌ಗಳ ಮಾಲಕರಾಗಿದ್ದಾರೆ.  ಅಲ್ಲದೆ ವಿವಿಧ ಆಹಾರೋತ್ಪನ್ನಗಳ ವಿತರಣೆ ಏಜೆಂಟ್ ಕೂಡಾ ಆಗಿದ್ದರು. ಧಾರ್ಮಿಕ ಆಸಕ್ತನೂ ಆಗಿದ್ದ ಅಂಪ ನಾಯಕ್ ಎರಡು ವರ್ಷಗಳ ಹಿಂದೆ ತನ್ನ ಮನೆ ಬಳಿಯಲ್ಲೇ ಶ್ರೀ ಶಿರ್ಡಿ ಸಾಯಿಬಾಬಾ ಕ್ಷೇತ್ರ ನಿರ್ಮಿಸಿದ್ದರು.

ಮೃತರು ಪತ್ನಿ ಸುಮತಿ, ಮಕ್ಕಳಾದ ನಿತ್ಯಾನಂದ ನಾಯಕ್, ಮಂಜುನಾಥ ನಾಯಕ್, ಗುರುದತ್ತ್ ನಾಯಕ್ , ಸೊಸೆಯಂದಿರಾದ  ನಿಖಿತ, ಭಾಗ್ಯ, ಗೀತಾ, ಸಹೋದರ-ಸಹೋ ದರಿಯರಾದ ಪ್ರಭಾಕರ ನಾಯಕ್, ರತ್ನಾಕರ ನಾಯಕ್, ಗೋವಿಂದ ನಾಯಕ್, ಗಣೇಶ್ ನಾಯಕ್, ಲಲಿತಾ ಪ್ರಭು, ಅನಸೂಯ ಪೈ, ರಮಾಭಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY