ದೇಶದಲ್ಲಿ ೫೭ ಲಕ್ಷ ದಾಟಿದ ಕೋವಿಡ್ ರೋಗಿಗಳು

0
35

ದಿಲ್ಲಿ: ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ೫೭ ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆಗೊಳಿಸಿದ ಲೆಕ್ಕಾಚಾರ ಪ್ರಕಾರ  ೮೬೫೦೮ ಮಂದಿಗೆ ಹೊಸತಾಗಿ ರೋಗ ಖಚಿತಪಡಿಸಲಾಗಿದೆ. ಇದ ರೊಂದಿಗೆ ದೇಶದಲ್ಲಿ ಒಟ್ಟು ರೋಗ ಬಾಧಿತರ ಸಂಖ್ಯೆ ೫೭,೩೨,೫೧೮ಕ್ಕೇರಿದೆ. ೨೪ ಗಂಟೆಯೊಳಗೆ ೧೧೨೯ ಮಂದಿ ಮೃತಪಟ್ಟಿದ್ದು, ಇದರಿಂದ ಒಟ್ಟು ಸಾವಿನ ಸಂಖ್ಯೆ ೯೧,೧೪೯ ಕ್ಕೇರಿದೆ ಎಂದು ತಿಳಿಸಲಾಗಿದೆ. ಇದೇ ವೇಳೆ ೪೬,೭೪,೯೮೭ ಮಂದಿ ಇದುವರೆಗೆ ರೋಗಮುಕ್ತರಾಗಿದ್ದಾರೆ. ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ (೬೫) ಅವರು ಕೋವಿಡ್ ಬಾಧಿಸಿ ನಿನ್ನೆ ಮೃತ ಪಟ್ಟಿದ್ದಾರೆ.

NO COMMENTS

LEAVE A REPLY