ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಐ.ಎಂ.ಎ. ಆಗ್ರಹ

0
71

ತಿರುವನಂತಪುರ: ಕೋವಿಡ್ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಬೇಕೆಂದು ಇಂಡ್ಯನ್ ಮೆಡಿಕಲ್ ಅಸೋಸಿ ಯೇಶನ್ (ಐಎಂಎ) ಬೇಡಿಕೆ ಮುಂದಿರಿಸಿದೆ. ಈ ಬೇಡಿಕೆ ಮುಂದಿರಿಸಿ ಐಎಂಎ ಮುಖ್ಯಮಂತ್ರಿಗೆ ಪತ್ರ ಬರೆದಿದೆ.  ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಐಎಂಎ ಇಂತಹವೊಂದು ಸಲ ಯನ್ನು ತಂದಿರಿಸಿದೆ.  ರೋಗ ಹರಡುವಿಕೆಯ ಗಂಭೀರ ಸ್ಥಿತಿ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಬೇ ಕಾಗಿದೆಯೆಂದೂ ಐಎಂಎ ತಿಳಿಸಿದೆ. ರೋಗ ಹರಡುವಿಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಸ್ತುತವುಳ್ಳ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಜ್ಯಾರಿಗೊಳಿಸಬೇಕು, ಸಾಧಾರಣ ಜನರ ಜತೆಗೆ ಆರೋಗ್ಯ ಕಾರ್ಯಕರ್ತರಲ್ಲೂ ರೋಗ ಹರಡುವಿಕೆ ಹೆಚ್ಚಿರುತ್ತದೆ. ಇದೇ ರೀತಿಯಲ್ಲಿ ಮುಂದುವರಿ ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು. ಈಗಾಗಲೇ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿಕೊಂಡಿದ್ದಾರೆ. ಪ್ರತಿದಿನ ರೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ರಾಜ್ಯದಲ್ಲಿ ಕಂಡು ಬರುತ್ತಿದೆ. ಕಳೆದ ೨೮ ದಿನಗಳೊಳಗೆ ಮಾತ್ರವಾಗಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ರಾಜ್ಯದಲ್ಲಿ ರೋಗ ಖಚಿತಪಡಿಸಿದೆ. ಹಾಗಿರುವಾಗ ಇನ್ನಷ್ಟು ರೋಗ ಹರಡದಂತೆ ತಡೆಯಲು ಆರೋಗ್ಯ ತುರ್ತು ಪರೀಕ್ಷೆ  ಜ್ಯಾರಿಗೊಳಿಸುವ ಬೇಡಿಕೆ ಮುಂದಿರಿಸಲಾಗಿದೆ.  ಕೋವಿಡ್ ಪ್ರತಿರೋಧ ಕ್ರಮಗಳ ಕುರಿತು ಸಮಾಲೋಚಿಸಲು  ಮುಖ್ಯಮಂತ್ರಿ ಕರೆದ ಸರ್ವಪಕ್ಷ ಸಭೆಯಲ್ಲಿ ಐಎಂಎ ನೀಡಿದ ಸಲಹೆಗಳನ್ನು ಪರಿಗಣಿಸಲಾಗುವುದೆಂದು ಹೇಳಲಾಗುತ್ತಿದೆ. ಇಂದು ಸಂಜೆ ೪ ಗಂಟೆಗೆ ಸರ್ವಪಕ್ಷ ಸಭೆ ನಡೆಯಲಿದೆ.

NO COMMENTS

LEAVE A REPLY